ಇಸ್ರೇಲ್‌ನಂತಹ ವಿನಾಶ ಕಾಶ್ಮೀರದಲ್ಲೂ ಸಂಭವಿಸಬಹುದು-ಪಾಕಿಸ್ತಾನದ ಬೆದರಿಕೆ

ನವದೆಹಲಿ: ಇಸ್ರೇಲ್‌ನಲ್ಲಿ ಸಂಭವಿಸಿರುವ ವಿನಾಶವು ಮುಂದೆ ಕಾಶ್ಮೀರದಲ್ಲೂ ಸಂಭವಿಸಬಹುದೆಂದು ಪಾಕಿಸ್ತಾನ ಬೆದರಿಕೆ ಹಾಕಿದೆ. ಭಾರತದಲ್ಲಿ ಪಾಕಿಸ್ತಾನದ ಹೈ ಕಮಿಶನರ್ ಆಗಿದ್ದ ಅಬ್ದುಲ್ ಬಾಸಿತ್  ಈ ರೀತಿಯ ಬೆದರಿಕೆಯ ಮಾತು ಗಳನ್ನು ಆಡಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಬೇಕಾದರೆ ಪ್ಯಾಲೆಸ್ತೀನ್ ಸಮಸ್ಯೆಯನ್ನು ಪರಿಹರಿಸಬೇಕು. ನಾವು ದಕ್ಷಿಣ ಏಷ್ಯಾದಲ್ಲಿ ಶಾಂತಿ ಬಯಸುವುದಾದರೆ ಅದಕ್ಕೆ ಮೊದಲು ಕಾಶ್ಮೀರ ವಿಷಯವನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇ ಕಾಗಿದೆ. ಭಾರತ ಮತ್ತು ಇಸ್ರೇಲ್ ತಮ್ಮ ಆಕ್ರಮಣಗಳನ್ನು ತೊರೆಯಬೇಕಾಗಿ ಬರಲಿದೆಯೆಂದೂ ಭಾರತಕ್ಕೆ ಒಡ್ಡಿರುವ ಬೆದರಿಕೆ ಹೇಳಿಕೆಯಲ್ಲಿ ಬಾಸಿತ್ ಹೇಳಿ ದ್ದಾರೆ.  ಪಾಕಿಸ್ತಾನಿ ಜನರು ಇಸ್ರೇಲ್ ನಾಗರಿಕರ ಶವಗಳನ್ನು  ನೋಡಿ ಸಂಭ್ರಮಿಸುತ್ತಿದ್ದಾರೆ.  ಪಾಕಿಸ್ತಾನ ಮನಸ್ಸು ಮಾಡಿದಲ್ಲಿ ಕೇವಲ ೧೨ ನಿಮಿಷಗಳಲ್ಲಿ ಇಸ್ರೇಲ್‌ನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದೆಂದೂ ಇನ್ನೊಂದೆಡೆ ಪಾಕಿಸ್ತಾನದ ಸೇನಾ ಅಧಿಕಾರಿಯೋರ್ವ ಹೇಳಿಕೆ ನೀಡಿದ್ದು ಆ ಮೂಲಕ ಅವರು  ಭಾರತಕ್ಕೂ ಪರೋಕ್ಷವಾಗಿ ಟ್ಯಾಂಗ್ ನೀಡಿದ್ದಾರೆ.

ಪಾಕಿಸ್ತಾನದ ಹಲವು ಮೂಲಭೂತವಾದಿ ಸಂಘಟನೆಗಳೂ ಸಾಮಾಜಿಕ ಮಾಧ್ಯಮಗಳ ಮೂಲಕ  ಇದೇ ರೀತಿಯ ಬೆದರಿಕೆಯನ್ನು ಭಾರತಕ್ಕೆ ಹಾಕತೊಡಗಿದೆ.

RELATED NEWS

You cannot copy contents of this page