ಈರುಳ್ಳಿ ಚೀಲಗಳಡಿ ಬಚ್ಚಿಟ್ಟು ಸಾಗಿಸಿದ ೫೩ ಚೀಲ ಪಾನ್‌ಮಸಾಲೆ ವಶ: ಇಬ್ಬರ ಸೆರೆ

ಕುಂಬಳೆ: ವಾಹನದಲ್ಲಿ ಈರುಳ್ಳಿ ತುಂಬಿದ ಗೋಣಿ ಚೀಲಗಳ ಅಡಿಭಾಗದಲ್ಲಿ ಬಚ್ಚಿಟ್ಟು ಸಾಗಿಸಲಾಗು ತ್ತಿದ್ದ    ಭಾರೀ ಪ್ರಮಾಣದ ಪಾನ್ ಮಸಾಲೆಯನ್ನು ಕುಂಬಳೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.  ಕರ್ನಾಟಕ ಭಾಗದಿಂದ   ಪಿಕ್‌ಅಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ೫೩ ಗೋಣಿ ಚೀಲ    ಪಾನ್ ಮಸಾಲೆ ವಶಪಡಿಸಲಾಗಿದೆ. ಇದಕ್ಕೆ ಸುಮಾರು ೭ ಲಕ್ಷ ರೂಪಾಯಿ ಮೌಲ್ಯ ಅಂದಾಜಿಸಲಾಗಿದೆಯೆಂದು  ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಲಪ್ಪುರಂ ಕೋಟೆಕ್ಕಲ್ ನಿವಾಸಿ ಗಳಾದ ಅಖಿಲ್ ಪಿ.ಕೆ (೩೦), ಸಾಜಿರ್ (೪೩) ಎಂಬಿವರನ್ನು ಬಂಧಿಸಲಾಗಿದೆ. ನಿನ್ನೆ ರಾತ್ರಿ ೮ ಗಂಟೆ ವೇಳೆ ಕುಕ್ಕಾರು ಸೇತುವೆ ಬಳಿ  ಡಿವೈಎಸ್ಪಿ ಸುಧಾಕರನ್, ಇನ್‌ಸ್ಪೆಕ್ಟರ್ ಇ. ಅನೂಪ್ ಕುಮಾರ್, ಎಸ್‌ಐ ವಿ.ಕೆ. ಅನೀಶ್ ಎಂಬಿವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಪಿಕ್‌ಅಪ್ ವಾಹನದಲ್ಲಿ ಈರುಳ್ಳಿ   ತುಂಬಿಸಿಟ್ಟ ಗೋಣಿ ಚೀಲಗಳ ಅಡಿಭಾಗದಲ್ಲಿ ಪಾನ್ ಮಸಾಲೆ ಬಚ್ಚಿಡಲಾಗಿತ್ತು.  ಇದನ್ನು  ಕರ್ನಾಟಕದಿಂದ ಮಲಪ್ಪುರಂಗೆ ಸಾಗಿಸಲು ಯತ್ನಿಸಲಾ ಗಿತ್ತೆಂದು  ಬಂಧಿತರು ತಿಳಿಸಿದ್ದಾರೆ.

RELATED NEWS

You cannot copy contents of this page