ಈಶ್ವರೀಯ ವಿಶ್ವವಿದ್ಯಾನಿಲಯದಲ್ಲಿ ಅಂತಾರಾಷ್ಟ್ರೀಯ ಧ್ಯಾನ, ವಿಶ್ವ ಕೃಷಿ ದಿನಾಚರಣೆ
ಕಾಸರಗೋಡು: ಅಂತಾರಾಷ್ಟ್ರೀ ಯ ಧ್ಯಾನ ದಿನ ಹಾಗೂ ವಿಶ್ವ ರೈತರ ದಿನವನ್ನು ಕಾಸರಗೋಡು ಬ್ರಹ್ಮಕು ಮಾರೀಸ್ ಈಶ್ವರೀಯ ವಿಶ್ವವಿದ್ಯಾನಿಲ ಯದಲ್ಲಿ ನಿನ್ನೆ ಆಚರಿಸಲಾಯಿತು. ಪ್ರಗತಿಪರ ಕೃಷಿಕ ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದರು. ಬ್ರಹ್ಮಕುಮಾರಿ ಕೇಂದ್ರದ ಸಂಯೋಜಕಿ ವಿಜಯಲಕ್ಷ್ಮಿ ಪ್ರಧಾನ ಭಾಷಣ ಮಾಡಿದರು. ಸಿಪಿಸಿಆರ್‌ಐ ಅಧಿಕಾರಿ ಬಿ.ಕೆ. ಸುಬ್ರಹ್ಮಣ್ಯ, ಬಿ.ಕೆ. ಮಂಗಳ ಮಾತನಾಡಿದರು. ನಿತ್ಯಾನಂದ ನೆಟ್ಟಣಿಗೆ, ಶಾರದಾ ನೆಟ್ಟಣಿಗೆ, ಬಾಲನ್ ನಾಯರ್, ಎಂ.ಎಚ್. ಜನಾರ್ದನ ಅತಿಥಿಗಳಾಗಿ ಭಾಗವಹಿಸಿದರು. ಬಿ.ಕೆ. ಸುದರ್ಶನ ನಿರೂಪಿಸಿದರು.