ಉಗ್ರಗಾಮಿಗಳ ಆಕ್ರಮಣ ಸಾಧ್ಯತೆ: ಮುಂಬೈಯಲ್ಲಿ ತೀವ್ರ ನಿಗಾ

ಮುಂಬೈ: ಉಗ್ರಗಾಮಿಗಳ ಆಕ್ರಮ ಣಕ್ಕೆ ಸಾಧ್ಯತೆ ಇದೆ ಎಂದು ಕೇಂದ್ರ ಏಜೆನ್ಸಿಗಳ ಮುನ್ನೆಚ್ಚರಿಕೆ ಆಧಾರದಲ್ಲಿ ಮುಂಬೈ ನಗರದಲ್ಲಿ ಭದ್ರತೆ ಹೆಚ್ಚಿಸಲಾ ಗಿದೆ. ಜನಸಂದಣಿ ಇರುವ ಸ್ಥಳಗಳಲ್ಲೂ, ಆರಾಧನಾಲಯಗಳಲ್ಲೂ ಭದ್ರತೆ ಹೆಚ್ಚಿಸಿರುವುದಾಗಿ ರಾಷ್ಟ್ರೀಯ ಮಾಧ್ಯ ಮಗಳು ವರದಿ ಮಾಡುತ್ತಿವೆ. ಭದ್ರತೆಯನ್ನು ಹೆಚ್ಚಿಸುವುದರಂಗವಾಗಿ ಮೋಕ್‌ಡ್ರಿಲ್ ಸಹಿತ ಆಯೋಜಿಸಲು ನಿರ್ದೇಶಿಸಲಾಗಿದೆ. ಸ್ವಂತ ಅಧಿಕಾರ ವ್ಯಾಪ್ತಿಯಲ್ಲಿ ಭದ್ರತೆಯನ್ನು ನಿರಂತರ ಅವಲೋಕನ ನಡೆಸಲು ಅಧಿಕಾರಿಗಳಿಗೆ ಸಿಟಿ ಪೊಲೀಸ್ ಕಮೀಷನರ್ ನಿರ್ದೇಶ ನೀಡಿದ್ದಾರೆ. ಸಂಶಯಕರವಾದ ವಿಷಯಗಳು ಕಂಡು ಬಂದರೆ ತಿಳಿಸಬೇಕೆಂದು ಜನರಲ್ಲಿ ವಿನಂತಿಸಲಾಗಿದೆ. ಹಬ್ಬದ ಕಾಲವಾದುದರಿಂದ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಮುಂದಿನ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿಯೂ ಭದ್ರತೆಯನ್ನು ಹೆಚ್ಚಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page