ಉಗ್ರ ನಿಗ್ರಹದಳದ ಕಾರ್ಯಾಚರಣೆ : ಮಾವೋವಾದಿ ನೇತಾರ ಸೆರೆ
ಕಾಸರಗೋಡು: ಉಗ್ರ ನಿಗ್ರಹದಳ (ಎಟಿಎಸ್) ಪಡೆ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮಾವೋವಾದಿ ನೇತಾರನೋರ್ವನನ್ನು ಬಂಧಿಸಲಾಗಿದೆ.
ತೃಶೂರು ಇವನ್ನೂರು ಪಡಿಞಾ ರತಲ ವೀಟಿಲ್ ಮನೋಜ್ (35) ಎಂಬಾತ ಬಂಧಿತನಾದ ಮಾವೋವಾದಿ ನಾಯಕ. ಎರ್ನಾಕುಳಂ ಸೌತ್ ರೈಲು ನಿಲ್ದಾಣದಲ್ಲಿ ಎಟಿಎಸ್ ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ಬಂಧಿತನು ೧೪ ಯು.ಎ.ಪಿ.ಎ. ಪ್ರಕರಣಗಳ ಆರೋ ಪಿಯೂ ಆಗಿದ್ದಾನೆ. ಈತ ಬ್ರಹ್ಮಾಪುರಕ್ಕೆ ತಲುಪಿ ಅಲ್ಲಿರುವ ತನ್ನ ಸ್ನೇಹಿತರಿಂದ ಹಣ ಪಡೆದು ಹಿಂತಿರುಗುತ್ತಿದ್ದ ದಾರಿ ಮಧ್ಯೆ ರೈಲು ನಿಲ್ದಾಣದಲ್ಲಿ ಸೆರೆಗೀಡಾಗಿ ದ್ದಾನೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೋರ್ಸ್‌ಗಾಗಿ ಸೇರಿದ್ದ ಮನೋಜ್ ಆ ಕೋರ್ಸನ್ನು ಅರ್ಧದಲ್ಲೇ ಕೈಬಿಟ್ಟು, ಮಾವೋವಾದಿ ಗುಂಪಿಗೆ ಸೇರಿದ್ದನು. ಕೇರಳವನ್ನು ಕೇಂದ್ರೀಕರಿಸಿ ಕಾರ್ಯ ವೆಸಗುತ್ತಿರುವ ಮಾವೋವಾದಿ ತಂಡಕ್ಕೆ ಸೇರಿರುವ ಈತ ವಯನಾಡು ಜಿಲ್ಲೆಯನ್ನೇ ಪ್ರಧಾನ ಕೇಂದ್ರವನ್ನಾಗಿಸಿ ಕಾರ್ಯವೆಸಗುತ್ತಿದ್ದನು. ವಯನಾಡು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಯವರು ಈತನನ್ನು ವಾಂಟೆಡ್ ಆರೋಪಿಗಳ ಯಾದಿಯಲ್ಲೂ ಒಳಪಡಿಸಿದ್ದಾರೆ.
ಮನೋಜ್ ಸೇರಿದಂತೆ ೨೦ ಮಾವೋವಾದಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಪಾರಿತೋಷಕವನ್ನು ಪೊಲೀಸರು ಈ ಹಿಂದೆಯೇ ಘೋಷಿಸಿ ದ್ದರು. ವಯನಾಡಿನ ಅರಣ್ಯದಲ್ಲಿ ಇತ್ತೀಚೆಗೆ ನೆಲಬಾಂಬ್ ಪತ್ತೆಯಾದ ಘಟನೆ ಬಳಿಕ ಮಾವೋವಾದಿಗಳ ಪತ್ತೆಗಾಗಿರುವ ಕಾರ್ಯಾಚರಣೆಯನ್ನು ಎಟಿಎಸ್ ಇನ್ನಷ್ಟು ತೀವ್ರಗೊಳಿಸಿತ್ತು. ಈ ಮಧ್ಯೆ ಅರಳಂ ಕೃಷಿ ವಲಯದಲ್ಲಿ ಕೆಲವು ದಿನಗಳ ಹಿಂದೆ ಮಾವೋವಾದಿ ನೇತಾರ ಮಲಪ್ಪುರಂ ನಿವಾಸಿ ಮೊಯ್ದೀನ್, ತಮಿಳುನಾಡಿನ ಸಂತೋಷ್, ವಯನಾಡಿನ ಸೋಮನ್ ಎಂಬವರು ಜತೆಗೆ ಮನೋಜ್ ಕೂಡಾ ಅರಳಂ ಫಾಂ ವಲಯಕ್ಕೆ ಬಂದಿದ್ದನೆಂಬ ಮಾಹಿತಿಯೂ ಎಟಿಎಸ್‌ಗೆ ಲಭಿಸಿತ್ತು. ಮಾವೋವಾದಿ ಗಳಿಗೆ ಹಣ ಆಹಾರ ಮತ್ತಿತರ ಸಹಾ ಯಗಳನ್ನು ಒದಗಿಸಿದ ಆರೋಪದಂತೆ ಬಾಬು ಎಂಬಾತನನ್ನು ಎರಡು ತಿಂಗಳ ಹಿಂದೆ ಪೊಲೀಸರು ಬಂಧಿಸಿದ್ದರು. ಮನೋಜ್ ಕಳೆದ ನಾಲ್ಕು ತಿಂಗಳಿಂದ ನಾಪತ್ತೆಯಾಗಿರುವುದಾಗಿ ಆತನ ತಾಯಿ ಕಳೆದ ವರ್ಷವೇ ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ನಡೆಸಿದ ತನಿಖೆ ಯಲ್ಲಿ ಮನೋಜ್ ಮಾವೋವಾದಿ ತಂಡಕ್ಕೆ ಸೇರಿದ್ದನೆಂಬ ಸ್ಪಷ್ಟ ಮಾಹಿತಿ ಪೊಲೀಸರಿಗೆ ಲಭಿಸಿತ್ತು.