ಉತ್ಸವ ಛಾಯೆಯಲ್ಲಿ ಕಾರಡ್ಕ ಗ್ರಾಮ : ನಾಳೆ ಜಿಲ್ಲಾ ಶಾಲಾ ಕಲೋತ್ಸವಕ್ಕೆ ಚಾಲನೆ
ಮುಳ್ಳೇರಿಯ: ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕಲೋ ತ್ಸವಕ್ಕೆ ನಾಳೆ ಬೆಳಿಗ್ಗೆ ಧ್ವಜಾರೋಹಣ ದೊಂದಿಗೆ ಚಾಲನೆ ದೊರೆಯಲಿದೆ. ಡಿಡಿಇ ಎನ್. ನಂದಿಕೇಶನ್ ಧ್ವಜಾ ರೋಹಣಗೈಯ್ಯುವರು. ದ.೭ರಂದು ಸಂಜೆ ೪ ಗಂಟೆಗೆ ಔಪಚಾರಿಕ ಉದ್ಘಾಟನೆ ನಡೆಯಲಿದ್ದು, ವಿಧಾನ ಸಭಾ ಸ್ಪೀಕರ್ ಎ.ಎನ್. ಶಂಸೀರ್ ಉದ್ಘಾಟನೆ ನಿರ್ವಹಿಸಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಭಾಗವಹಿಸುವರು.
ಕಾರಡ್ಕ ಶಾಲೆಯಲ್ಲಿ ನಡೆಯುವ ಕಲೋತ್ಸವವನ್ನು ಊರಿನ ಉತ್ಸವವಾಗಿ ಬದಲಿಸಲು ಈಗಾಗಲೇ ಸಕಲ ಸಿದ್ಧತೆ ನಡೆಸಲಾಗಿದೆ. ಶಾಲೆಯನ್ನು ಬಣ್ಣಹಚ್ಚಿ ಅಂದಗೊಳಿಸಿ ಆವರಣ ಗೋಡೆಗಳಲ್ಲಿ ಸುಂದರ ಚಿತ್ರಗಳನ್ನು ರಚಿಸಿ, ದಾರಿಗೆ ದೀಪಗಳನ್ನು ಅಳವಡಿಸಿ, ಪ್ರವೇಶ ದ್ವಾರದಲ್ಲಿ ಸ್ವಾಗತ ಕಮಾನು ಸ್ಥಾಪಿಸಲಾಗಿದೆ. ಏಳು ಉಪಜಿಲ್ಲೆ ಗಳಿಂದ ಸುಮಾರು ೫೦ಸಾವಿರ ಮಂದಿ ಭಾಗವಹಿಸಬಹು ದೆಂದು ನಿರೀಕ್ಷಿ ಸುವ ಈ ಕಲೋತ್ಸವವನ್ನು ಊರ ನಾಗರಿಕರು ಸ್ವಾಗತಿಸಲು ಸಿದ್ಧರಾಗಿದ್ದಾರೆ. ಸ್ಥಳೀಯ ಸಂಘಸಂಸ್ಥೆಗಳು ಶಾಲಾ ಕಲೋತ್ಸವಕ್ಕೆ ಬೆಂಬಲ ನೀಡಲು ಸಜ್ಜಾಗಿವೆ. ಪೂರ್ವವಿದ್ಯಾರ್ಥಿ ಸಂಘಟನೆ ಸಹಿತ ಹಲವು ಮಂದಿ ಶಾಲೆ ಪರಿಸರವನ್ನು ಸ್ವಚ್ಛಗೊಳಿಸಲು ಹಲವು ದಿನಗಳಿಂದ ಸೇವೆ ಸಲ್ಲಿಸಿದ್ದಾರೆ.
ನಾಳೆ ಹಾಗೂ ೬ರಂದು ವೇದಿ ಕೇತರ ಸ್ಪರ್ಧೆಗಳು ನಡೆಯಲಿದ್ದು, ೭ರಿಂದ ವೇದಿಕೆ ಸ್ಪರ್ಧೆಗಳು ಆರಂ ಭಗೊಳ್ಳಲಿದೆ. ವೇದಿಕೆ ಸ್ಪರ್ಧೆಗಳಿಗಾಗಿ ೧೨ ವೇದಿಕೆಗಳನ್ನು ವಿವಿಧ ಹೆಸರುಗಳಲ್ಲಿ ಸಜ್ಜುಗೊಳಿಸಲಾಗಿದೆ. ಇನ್ನು ಈ ಪರಿಸರದ ಜನರಿಗೆ ಉತ್ಸವ ದಿನಗಳಾಗಿ ಜಿಲ್ಲೆಯೇ ಕಾರಡ್ಕದತ್ತ ಮುಖ ಮಾಡಲಿದೆ.
ಜಿಲ್ಲಾ ಶಾಲಾ ಕಲೋತ್ಸವದ ಡಂಗುರ ಜಾಥಾ ಇಂದು ಸಂಜೆ ಮುಳ್ಳೇರಿಯ ಆರೋಗ್ಯಕೇಂದ್ರದ ಸಮೀಪದಿಂದ ಆರಂಭಗೊಳ್ಳುವುದು.