ಉದ್ಘಾಟನೆಗೆ ಸಿದ್ಧಗೊಂಡ ತೂಮಿನಾಡು ಜಂಕ್ಷನ್ ಕಾಲ್ನಡೆ ಸೇತುವೆ
ಮಂಜೇಶ್ವರ: ತೂಮಿನಾಡುನಲ್ಲಿ ಕಾಲ್ನಡಿಗೆಯ ಮೇಲ್ಸೇತುವೆ ಉದ್ಘಾಟನೆಗೆ ಸಿದ್ಧಗೊಂಡಿದ್ದು, ಸ್ಥಳೀಯರ ಸಂಚಾರ ಸುಗಮಗೊಳ್ಳುವ ಹಾದಿ ಸಿದ್ಧವಾಗುತ್ತಿದೆ. ಷಟ್ಪಥ ಹೆದ್ದಾರಿ ನಿರ್ಮಾಣಗೊಂಡ ಬಳಿಕ ರಸ್ತೆಯ ಇಕ್ಕಡೆಗಳಲ್ಲೂ ತಡೆ ಬೇಲಿ ಹಾಕಿದ ಕಾರಣ ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಲು ಸಮಸ್ಯೆ ಉಂಟಾಗಿತ್ತು. ಕುಂಜತ್ತೂರು ಹೈಯರ್ ಸೆಕೆಂಡರಿ ಶಾಲೆಗೆ ತಲುಪುವ ವಿದ್ಯಾರ್ಥಿ ಗಳಿಗೂ ಇದು ಸಂಕಷ್ಟ ತಂದಿತ್ತಿತ್ತು. ಈ ಹಿನ್ನೆಲೆಯಲ್ಲಿ ತೂಮಿನಾಡು ಜಂಕ್ಷನ್‌ನಲ್ಲಿ ಕಾಲ್ನಡೆ ಮೇಲ್ಸೇತುವೆ ನಿರ್ಮಿಸಬೇಕೆಂಬ ಸ್ಥಳೀಯರ ಒಕ್ಕರಲಿನ ಬೇಡಿಕೆ ಸಾಕಾರಗೊಂಡು ಉದ್ಘಾಟನೆಗೆ ಸಿದ್ಧವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಧಾರಿತ ಸಂಚಾರ ವ್ಯವಸ್ಥೆಗಳನ್ನು ಉಪಯೋಗಿಸಿ ಇಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ದಿನದಿಂದ ದಿನಕ್ಕೆ ಅಭಿವೃದ್ಧಿಗೊಳ್ಳುತ್ತಿ qರುವ ತೂಮಿನಾಡು ಪೇಟೆಯಲ್ಲಿ ಈ ಕಾಲ್ನಡೆ ಸೇತುವೆ ಸಂಚಾರದಟ್ಟಣೆ ಕಡಿಮೆ ಮಾಡಲು ಸಹಾಯಕವಾಗಲಿದೆ.