ಉಪ್ಪಳ: ಕಯ್ಯಾರು ನಿವಾಸಿ ಉದ್ಯಮಿ, ಧಾರ್ಮಿಕ ಮುಂದಾಳು ಹರಿಶ್ಚಂದ್ರ ಹೊಳ್ಳ (83) ನಿಧನ ರಾದರು. ನಿನ್ನೆ ಮಧ್ಯಾಹ್ನ ಇವರಿಗೆ ಮನೆಯಲ್ಲಿ ಹೃದಯÁಘಾತ ಉಂ ಟಾಗಿತ್ತು. ಉಪ್ಪಳದ ಪೂರ್ಣಿಮಾ ಇಂಡಸ್ಟಿçÃಸ್ ಇದರ ಮಾಲಕರಾಗಿ ದ್ದರು. ಉಪ್ಪಳ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರಾಗಿದ್ದರು. ಕೂಟ ಮಹಾಜಗತ್ತು ಮಂಗಲ್ಪಾಡಿ ಅಂಗಸAಸ್ಥೆಯ ಪ್ರದಾನಿಯÁಗಿ ದ್ದರು. ಅಲ್ಲದೆ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಮತ್ತು ಸಂಘ ಸಂಸ್ಥೆಗಳಿಗೆ ಉದಾರ ಸಹಾಯ ನೀಡುತ್ತಿದ್ದರು. ಮೃತರು ಪತ್ನಿ ಲಲಿತ, ಮಕ್ಕಳಾದ ಪೂರ್ಣಿಮಾ, ಪದ್ಮಿನಿ, ಪ್ರೀತಿ, ಸಂತೋಷ್ ಹೊಳ್ಳ, ಅಳಿ ಯಂದಿರಾದ ಅರುಣ್ ಕುಮಾರ್, ಶಶಿಕಾಂತ್, ಹೇಮಂತ್, ಸೊಸೆ ಲಕ್ಷಿ÷್ಮÃ, ಸಹೋದರರಾದ ಡಾ.ಕೆ.ಪಿ ಹೊಳ್ಳ, ರಾಧಾಕೃಷ್ಣ ಹೊಳ್ಳ, ವಿಷ್ಣು ಹೊಳ್ಳ, ಶ್ರೀಧರ ಹೊಳ್ಳ, ಸೂರ್ಯ ನಾರಾಯಣ ಹೊಳ್ಳ, ಸಹೋದರಿ ಶ್ಯಾಮಲ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
