ಉದ್ಯಾವರ ಗುಡ್ಡೆ ಸರಕಾರಿ ಪ್ರೌಢ ಶಾಲೆಯಿಂದ 15,000 ರೂ. ಕಳವು
ಮಂಜೇಶ್ವರ: ಉದ್ಯಾವರದ ಗುಡ್ಡೆ ಸರಕಾರಿ ಪ್ರೌಢ ಶಾಲೆಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ 15 ಸಾವಿರ ರೂ ಕಳವುಗೈದ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಸಿಬ್ಬಂದಿ ಶಾಲೆಗೆ ಆಗಮಿಸಿದಾಗ ಶಾಲಾ ಕಚೇರಿಯ ಮುಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಒಳಗೆ ಹೋಗಿ ನೋಡಿದಾಗ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಖರೀದಿಸಲೆಂದು ತೆಗೆದಿರಿಸಿದ್ದ 15ಸಾವಿರ ರೂ ಕಳ್ಳರು ಲಪಟÁಯಿಸಿದ್ದಾರೆ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರ ಹೊಣೆಗಾರಿಕೆಯುಳ್ಳ ಅಧ್ಯಾಪಿಕೆ ಮಲ್ಲಿಕ ಪೊಲೀಸರಿ ದೂರು ನೀಡಿದ್ದಾರೆ.
ಅಲ್ಲದೆ ಈ ಶಾಲೆಯ ಸಮೀಪದ ಸಿರಾಜುಲ್ ಹುದಾ ಶಾಲೆಗೂ ನುಗ್ಗಿದ ಕಳ್ಳರು ಅಲ್ಲಿಂದ 1500 ರೂಗಳನ್ನು ದೋಚಿದ್ದಾರೆ.
ಈ ಪರಿಸರದ ಸಿಸಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವ ಹಾದು ಹೋಗುತ್ತಿರುವುದು ಪತ್ತೆಯಾಗಿದೆನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ.