ಉದ್ಯಾವರ ಮಾಡದಲ್ಲಿ ಶ್ರೀ ಶಾರದಾ ಮಹೋತ್ಸವ ೨೩ರಂದು
ಮಂಜೇಶ್ವರ: ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಆಶ್ರಯದಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ, ಮಾತೃಮಂಡಳಿ, ಸೇವಾ ಭಾರತಿ ಉದ್ಯಾವರ ಮಾಡ ಇದರ ಸಹಕಾರÀದೊಂದಿಗೆ 34ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಈ ತಿಂಗಳ 23ರಂದು ಉದ್ಯಾವರ ಮಾಡದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬೆಳಿಗ್ಗೆ 7ಕ್ಕೆ ಶ್ರೀ ಶಾರದಾ ದೇವಿಯ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಬಳಿಕ ಗಣಹೋಮ, ಬೆಳಿಗ್ಗೆ 10ರಿಂದ ವಿವಿಧ ತಂಡಗಳಿAದ ಭಜನೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಜೆ 5.30ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಮೆರವಣಿಗೆ ಬಳಿಕ ಕಣ್ವತೀರ್ಥ ಶ್ರೀ ರಾಮ ಸಮುದ್ರದಲ್ಲಿ ಜಲಸ್ತಂಭನ ನಡೆಯಲಿದೆ.