ಉದ್ಯೋಗ ಆಮಿಷವೊಡ್ಡಿ ವಂಚನೆ:೫ ಸಾವಿರ ಭಾರತೀಯರು ಕಾಂಬೋಡಿಯಾದಲ್ಲಿ ಸೆರೆ
ನವದೆಹಲಿ: ಡಾಟಾ ಎಂಟ್ರಿ ಉದ್ಯೋಗದ ಆಮಿಷವೊಡ್ಡಿ ಬಳಿಕ ವಂಚನೆಗೊಳಗಾದ ಐವತ್ತು ಸಾವಿರದಷ್ಟು ಭಾರತೀಯರನ್ನು ಕಾಂಬೋಡಿಯಾದಲ್ಲಿ ಒತ್ತೆಸೆರೆ ಇರಿಸಲಾಗಿದೆ. ಇದರಲ್ಲಿ ಬಹುಪಾಲು ಮಂದಿ ರಕ್ಷಣಾ ಭಾರತೀಯರೇ ಆಗಿದ್ದಾರೆ. ಅದರಲ್ಲೂ ಹೆಚ್ಚಿನ ಮಂದಿ ಕೇರಳೀಯರಾಗಿದ್ದಾರೆಂಬ ಮಾಹಿತಿಯೂ ಲಭಿಸಿದೆ.
ಕಾಂಬೋಡಿಯಾದಲ್ಲಿ ಸಿಲುಕಿರುವ ಭಾರತೀಯರ ಪೈಕಿ ೧೩೦ ಮಂದಿ ಅಲ್ಲಿನ ನೋಮ್ ಪೆನ್‌ನಲ್ಲಿರುವ ಭಾರತೀಯ ರಾಯಬಾರಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ಈ ರೀತಿ ಸೈಬರ್ ವಂಚ ನೆಗಳನ್ನು ಬಲವಂತವಾಗಿ ನಡೆಸಲು ಬಳಸಿಕೊಂಡಿದ್ದ ೭೫ ಮಂದಿ ಭಾರತೀಯರನ್ನು ರಕ್ಷಿಸಲಾಗಿದೆಯೆಂದು ದ್ವಿತೀಯ ಕಾರ್ಯದರ್ಶಿ (ಕಾನ್ಸುಲರ್ ಆಂಡ್ ಡಾಯಾ ಸ್ಟೋರ್) ಅವರನ್ ಅಬ್ರಾಹಂ ಹೇಳಿದ್ದಾರೆ. ೫ಸಾವಿರಕ್ಕೂ ಹೆಚ್ಚು ಭಾರತೀಯರನ್ನು ಕಾಂಬೋಡಿ ಯಾದಲ್ಲಿ ಅವರ ಇಚ್ಛೆಗೆ ವಿರುದ್ಧವಾಗಿ ಬಂಧಿಸಲಾಗಿದೆ. ಇವರನ್ನು ವಂಚನೆ ನಡೆಸಲು ಬಲವಂತಪಡಿಸಲಾಗಿದೆ. ಇವರನ್ನು ಬಳಸಿ ಅಲ್ಲಿನ ಸೈಬರ್ ವಂಚಕರು ಭಾರತ ಸೇರಿದಂತೆ ಹಲವು ದೇಶಗಳಿಂದಾಗಿ ಕೋಟಿಗಟ್ಟಲೆ ರೂಪಾಯಿಗಳನ್ನು ವಂಚಸಿದ್ದಾರೆ. ಸರ್ಕಾರದ ಅಂದಾಜಿನ ಪ್ರಕಾರ ಈ ವಂಚಕರು ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಮಾತ್ರವಾಗಿ ಕನಿಷ್ಠ ಐನೂರು ಕೋಟಿ ರೂ.ಗಳ ವಂಚನೆ ನಡೆಸಿದ್ದಾರೆ. ಭಾರತೀಯರನ್ನು ಬಳಸಿ ಅವರ ಮೂಲಕ ಇಂತಹ ಸೈಬರ್ ವಂಚನೆ ನಡೆಸಲಾಗುತ್ತಿದೆ. ಹೀಗೆ ವಂಚಕರ ಬಲೆಗೆ ಸಿಕ್ಕಿಬಿದ್ದಿರುವ ಬ್ಯಾಗ್‌ಗಳಲ್ಲಿ ಕೆಲವೊಂದು ಅನುಮಾನಾಸ್ಪದ ವಸ್ತುಗಳನ್ನು ಅವರ ಅರಿವಿಲ್ಲದೆ ಇರಿಸಿ ಅದರ ಹೆಸರಲ್ಲಿ ವಂಚಕರು ಬೆದರಿಕೆಯೊಡ್ಡತೊಡಗಿ ದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ಮತ್ತು ಇತರ ಭದ್ರತಾ ತಜ್ಞರೊಂದಿಗೆ ಭಾರತ ಸರಕಾರ ಸಭೆ ನಡೆಸಿ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ರಕ್ಷಿಸುವ ಕಾರ್ಯತಂತ್ರದಲ್ಲಿ ತೊಡಗಿದೆ.