ಉದ್ಯೋಗ ವಾಗ್ದಾನ ನೀಡಿ 2.23 ಕೋಟಿ ರೂ. ಲಪಟಾವಣೆ: ಪ್ರಕರಣ ದಾಖಲು
ಕಾಸರಗೋಡು: ಉದ್ಯೋಗ ನೀಡುವುದಾಗಿ ನಂಬಿಸಿ 2.23 ಕೋಟಿ ರೂ. ವಂಚನೆ ಗೈಯ್ಯಲಾಗಿದೆ ಎಂದು ಆರೋಪಿಸಿ ಕಾಸರಗೋಡು ಬೀರಂತಬೈಲ್ನ ಐಎಂಎ ರಸ್ತೆ ಬಳಿ ವಾಸಿಸುತ್ತಿರುವ ಮೂಲತಃ ತಮಿಳುನಾಡು ವೆಲ್ಲೂರು ಎಲ್ಜಿ ಪುತ್ತೂರು ಗ್ರಾಮದ ಸುರೇಶ್ ಬಾಬು ಎಸ್. ಎಂಬವರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟೆಲಿಗ್ರಾA ಮೂಲಕ, ಚಾಟ್ ಮೂಲಕ ಪರಿಚಯಗೊಂಡ ಓರ್ವ ವ್ಯಕ್ತಿ ಹೋಮ್ ಬೇಸ್ಡ್ ಪಾರ್ಟ್ ಟೈಮ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದನೆಂದೂ, ಅದನ್ನು ನಂಬಿದ ತಾನು 2024 ಮೇ 17ರಿಂದ ಆರಂಭಗೊAಡು 2024 ಜೂನ್ 4ರ ನಡುವಿನ ಅವಧಿಯಲ್ಲಿ ವಿವಿಧ ದಿನಗಳಲ್ಲಾಗಿ ಆತನ ಬ್ಯಾಂಕ್ ಖಾತೆಗೆ 2,23,94,993 ರೂ. ಕಳುಹಿಸಿಕೊಟ್ಟಿದೆ.
ಅದರಲ್ಲಿ ಆತ 87,125 ರೂ. ತನಗೆ ಹಿಂತಿರುಗಿಸಿದನೆAದೂ ಬಾಕಿ 2,23,07,868 ರೂ.ವನ್ನಾಗಲೀ, ಅದರ ಲಾಭವನ್ನಾಗಲೀ ಬಳಿಕ ನೀಡದೆ ತನ್ನನ್ನು ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಸುರೇಶ್ಬಾಬು ಆರೋಪಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.