ಉದ್ಯೋಗ ಹೆಸರಲ್ಲಿ ಹಣ ಪಡೆದು ವಂಚನೆ: ಡಿವೈಎಫ್‌ಐ ನೇತಾರೆಯನ್ನು ಬಂಧಿಸಬೇಕು- ಕೆ. ಶ್ರೀಕಾಂತ್

ಕಾಸರಗೋಡು: ಉದ್ಯೋಗ ಭರವಸೆಯೊಡ್ಡಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಡಿವೈಎಫ್‌ಐ ನೇತಾರೆ ಅಧ್ಯಾಪಿಕೆಯಾದ ಸಚಿತಾ ರೈಯನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್ ಒತ್ತಾಯಿಸಿದ್ದಾರೆ. ಸಿಪಿಸಿಆರ್‌ಐಯಲ್ಲಿ ಉದ್ಯೋಗ ದೊರಕಿಸಿ ಕೊಡುವುದಾಗಿ ಭರವಸೆಯೊಡ್ಡಿ ಯುವತಿಯೋರ್ವೆಯಿಂದ 15 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತ ಪಡೆದು ವಂಚಿಸಿದ ಆರೋಪದಂತೆ ಕುಂಬಳೆ ಪೊಲೀಸರು ಸಚಿತಾ ರೈ ವಿರುದ್ಧ ಕೇಸು ದಾಖಲಿಸಿದ್ದರೂ ಆರೋಪಿಯನ್ನು ಬಂಧಿಸಿಲ್ಲ. ಡಿವೈಎಫ್‌ಐ ಜಿಲ್ಲಾ ನೇತಾರೆಯೂ ಆಗಿರುವ ಸಚಿತಾ ರೈ ಹಲವು ಸಂಸ್ಥೆಗಳಲ್ಲಿ ಉದ್ಯೋಗದ ಭರವಸೆಯೊಡ್ಡಿ ಹಲವರಿಂದ ಕೋಟ್ಯಂತರ ರೂಪಾಯಿ ಲಪಟಾಯಿಸಿ ರುವುದಾಗಿ ಅವರು ಆರೋಪಿಸಿದ್ದಾರೆ. ಈ ವಂಚನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಶ್ರೀಕಾಂತ್ ಒತ್ತಾಯಿಸಿದ್ದಾರೆ.

You cannot copy contents of this page