ಉಪ್ಪಳದಲ್ಲಿ ಚರಂಡಿಗೆ ಬಿದ್ದ ಸಾರಿಗೆ ಬಸ್‌ನ ಚಕ್ರ
ಉಪ್ಪಳ: ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಮಲಬಾರ್ ಬಸ್‌ನ ಮುಂಭಾಗದ ಚಕ್ರ ಚರಂಡಿ ಹೊಂಡಕ್ಕೆ ಬಿದ್ದ ಘಟನೆ ಇಂದು ಬೆಳಿಗ್ಗೆ ಉಪ್ಪಳ ಬಸ್ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ನಿಲ್ದಾಣಕ್ಕೆ ಪ್ರವೇಶಿಸಿ ಅಲ್ಲಿಂದ ತಿರುಗಿ ಕಾಸರಗೋಡಿನತ್ತ ತೆರಳುತ್ತಿದ್ದಾಗ ಸರ್ವೀಸ್ ರಸ್ತೆ ಬಳಿಯಲ್ಲಿ ನಿರ್ಮಿಸುತ್ತಿರುವ ಚರಂಡಿಗೆ ಬಸ್‌ನ ಚಕ್ರ ಬಿದ್ದಿದೆ. ಆದರೆ ಯಾವುದೇ ಅಪಾಯ ಸಂಭವಿಸಲಿಲ್ಲ. ಪ್ರಯಾಣಿಕರನ್ನು ಇನ್ನೊಂದು ಬಸ್‌ನಲ್ಲಿ ಕಳುಹಿಸಿಕೊಡಲಾಯಿತು. ಈ ವೇಳೆ ಅಲ್ಪ ಹೊತ್ತು ಬಸ್‌ಗಳಿಗೆ ಉಪ್ಪಳ ನಿಲ್ದಾಣಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಕ್ರೇನ್ ತಂದು ಬಸ್‌ನ್ನು ಚರಂಡಿಯಿಂದ ಮೇಲೆತ್ತಲು ಯತ್ನ ನಡೆಸಲಾಗುತ್ತಿದೆ.