ಉಪ್ಪಳದಲ್ಲಿ ಮತ್ತೆ ಮಾದಕವಸ್ತು ಬೇಟೆ: 1 ಕಿಲೋ ಗಾಂಜಾ ಸಹಿತ ಓರ್ವ ಸೆರೆ

ಉಪ್ಪಳ: ಉಪ್ಪಳದಲ್ಲಿ ಮತ್ತೆ ಮಾದಕವಸ್ತುವಾದ ಗಂಜಾ ಪತ್ತೆಹಚ್ಚಲಾಗಿದೆ. ಗುಪ್ತ ಮಾಹಿತಿಯ ಹಿನ್ನೆಲೆಯಲ್ಲಿ ಮನೆಯೊಂದಕ್ಕೆ ದಾಳಿ ನಡೆಸಿದ ಮಂಜೇಶ್ವರ ಪೊಲೀಸರು ಒಂದು ಕಿಲೋ ಗಾಂಜಾ ವಶಪಡಿಸಿ ಕೊಂಡಿದ್ದಾರೆ. ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಮುಹಮ್ಮದ್ ಹರ್ಷಾದ್ (49) ಎಂಬಾತನನ್ನು ಈ ಸಂಬಂಧ ಬಂಧಿಸಲಾಗಿದೆ. ಗಾಂಜಾ ತೂಕ ಮಾಡಲು ಉಪಯೋಗಿಸುವ ತಕ್ಕಡಿ, ಚಿಲ್ಲರೆಯಾಗಿ ಮಾರಾಟಗೈಯ್ಯಲಿರುವ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಲಾಗಿದೆ. ನಿನ್ನೆ ರಾತ್ರಿ 11 ಗಂಟೆ ವೇಳೆ ಮಂಜೇಶ್ವರ ಎಸ್‌ಐ ನಿಖಿಲ್‌ರ ನೇತೃತ್ವದಲ್ಲಿ ಮುಹಮ್ಮದ್ ಹರ್ಷಾದ್‌ನ ಮನೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಗಾಂಜಾವನ್ನು ಬ್ಯಾಗ್‌ನಲ್ಲಿ ತುಂಬಿಸಿ ಮಂಚದಡಿಯಲ್ಲಿ ಬಚ್ಚಿಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಎಎಸ್‌ಐ ದಿನೇಶ್, ಪೊಲೀಸರಾದ ಅಶ್ವಿನಿ, ರತೀಶ್, ಚಾಲಕ ನಿತೇಶ್ ಎಂಬಿವರಿದ್ದರು.

You cannot copy contents of this page