ಉಪ್ಪಳ ಗೇಟ್ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಸಂಗ್ರಹ: ಸಂಚಾರ ಸಮಸ್ಯೆ

ಉಪ್ಪಳ: ಉಪ್ಪಳ ಗೇಟ್ ಬಳಿ ನಿರ್ಮಿಸಲಾಗಿರುವ ಅಂಡರ್ ಪಾಸ್ ನಲ್ಲಿ ಸಣ್ಣ ಮಳೆ ಸುರಿದರೂ ನೀರು ಸಂಗ್ರಹಗೊAಡು ಸಂಚಾರ ಸಮಸ್ಯೆ ಉಂಟಾಗುತ್ತಿದೆ. ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿದ ಕಾರಣ ನೀರು ತುಂಬಿಕೊಳ್ಳುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಬೇಸಿಗೆ ಕಾಲದ ಮಳೆಯಲ್ಲೇ ಅಂಡರ್‌ಪಾಸ್ ಹಾಗೂ ಸರ್ವೀಸ್ ರಸ್ತೆಯಲ್ಲಿ ಪೂರ್ಣವಾಗಿ ನೀರು ಕಟ್ಟಿ ನಿಂತು ಸಂಚಾರಕ್ಕೆ ಪರದಾಡಬೇಕಾದ ಅವಸ್ಥೆ ಎದುರಾದರೆ ಮಳೆಗಾಲದಲ್ಲಿ ಏನಾಗಬಹುದೆಂಬ ಭಯ ಇಲ್ಲಿಯ ಜನರನ್ನು ಕಾಡುತ್ತಿದೆ. ರೈಲ್ವೇ ಗೇಟ್‌ಗೆ ತಾಗಿಕೊಂಡೇ ನಿರ್ಮಿಸಲಾಗಿರುವ ಈ ಅಂಡರ್ ಪಾಸಿನಲ್ಲಿ ನೀರು ತುಂಬಿದರೆ ವಾಹನ ಸಂಚಾರ ಪೂರ್ಣವಾಗಿಯೂ ಸ್ಥಗಿತಗೊಳ್ಳುವ ಪರಿಸ್ಥಿತಿ ಎದುರಾಗಲಿದೆ.
ಸುತ್ತಮುತ್ತಲಿನ ಪ್ರದೇಶದಿಂದ ಹರಿದು ಬರುವ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸದೇ ಅಂಡರ್ ಪಾಸ್ ನಿರ್ಮಾಣ ಮಾಡಿರುವುದಾಗಿ ಸ್ಥಳೀಯರು ದೂರಿದ್ದಾರೆ. ಸಂಬAಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳಬೇಕೆಂದು ಊರವರು ಆಗ್ರಹಿಸಿದ್ದಾರೆ.

You cannot copy contents of this page