ಉಪ್ಪಳ ಗೇಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋರಿಕ್ಷಾಕ್ಕೆ ಕಾರು ಢಿಕ್ಕಿ: ಚಾಲಕ ಸ್ಥಳದಲ್ಲೇ ಮೃತ್ಯು

ಉಪ್ಪಳ: ಆಟೋರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ರಿಕ್ಷಾ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಉಪ್ಪಳ ಗೇಟ್ ರಾಷ್ಟಿçÃಯ ಹೆದ್ದಾರಿಯಲ್ಲಿ ಬುಧವಾರ ಸಂಜೆ 4.45ರ ವೇಳೆ ನಡೆದಿದೆ. ಕಾಞಂಗಾಡ್ ಬಳಿಯ ನಿಟ್ಟಡುಕಂ ನಿವಾಸಿ ಆಟೋರಿಕ್ಷಾ ಚಾಲಕ ಮೋಹನನ್ (51) ಎಂಬವರು ಮೃತಪಟ್ಟಿದ್ದಾರೆ. ಇವರು ಆಟೋರಿಕ್ಷಾದಲ್ಲಿ ತಲಪಾಡಿಯಲ್ಲಿರುವ ದೈವಸ್ಥಾನಕ್ಕೆ ದೈವದ ಮೊಗಗಳನ್ನು ತಲುಪಿಸಲು ಕಾಞಂಗಾಡಿನಿAದ ಹೊರಟಿದ್ದರು. ಈ ಮಧ್ಯೆ ಉಪ್ಪಳ ಗೇಟ್‌ಗೆ ತಲುಪಿದಾಗ ಎದುರು ಭಾಗದಿಂದ ಅಮಿತ ವೇಗದಲ್ಲಿ ಬಂದ ಕಾರು ಡಿಕ್ಕಿಹೊಡೆದಿದೆ. ಇದರಿಂದ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅಗ್ನಿ ಶಾಮಕದಳ, ಪೋಲೀಸರು ಹಾಗೂ ಸ್ಥಳೀಯರು ಸೇರಿ ಚಾಲಕನನ್ನು ಹೊರಕ್ಕೆ ತೆಗೆದಿದ್ದಾರೆ. ಗಂಭೀರ ಗಾಯಗೊಂಡ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ನಿನ್ನೆ ಮುಂಜಾನೆ ಸಂಬAಧಿಕರಿಗೆ ಬಿಟ್ಟುಕೊಡಲಾಗಿದೆ. ಕಾಞಂಗಾಡ್ ಬಸ್ ನಿಲ್ದಾಣ ಬಳಿಯಿರುವ ಆಟೋರಿಕ್ಷಾ ನಿಲ್ದಾಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಿ ಬಳಿಕ ಮನೆಗೆ ಕೊಂಡೊಯ್ದು, ಅಂತ್ಯಸAಸ್ಕಾರ ನಡೆಸಲಾಯಿತು. ಮೃತರು ದಿ| ಪದ್ಮನಾಭನ್ -ದಿ| ಪಾರ್ವತಿ ದಂಪತಿ ಪುತ್ರನಾಗಿದ್ದು, ಪತ್ನಿ ಲತಾ, ಮಕ್ಕಳಾದ ಪಾರ್ವತಿ, ಅಕ್ಷಿತಾ, ಸಹೋದರಿ ಉಷಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಅಪಘಾತಕ್ಕೆ ಸಂಬAಧಿಸಿ ಕಾರು ಚಾಲಕನ ವಿರುದ್ದ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.

You cannot copy contents of this page