ಉಪ್ಪಳ ಪೇಟೆಯಲ್ಲಿ ಟ್ರಾಫಿಕ್ ಜಾಮ್: ಬಸ್ ಪ್ರಯಾಣಿಕರ ಸಹಿತ ಜನರ ಸಂಚಾರಕ್ಕೆ ಸಮಸ್ಯೆ ಸೃಷ್ಟಿ

ಉಪ್ಪಳ: ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಪ್ಲೆöÊ ಓವರ್ ನಿರ್ಮಾಣದ ಕಾಮಗಾರಿ ಉಪ್ಪಳ ಪೇಟೇಯಲ್ಲಿ ಭರದಿಂದ ಸಾಗುತ್ತಿದ್ದಂತೆ ಟ್ರಾಫಿಕ್ ಜಾಮ್ ಉಂಟÁಗುತ್ತಿರುವುದು ನಿತ್ಯ ಘಟನೆಯಾಗಿರುವುದಾಗಿ ದೂರಲಾಗಿದೆ. ಮಧ್ಯಾಹ್ನ ಹಾಗೂ ಸಂಜೆ ಹೊತ್ತಲ್ಲಿ ವಾಹನಗಳ ದಟ್ಟಣೆಯಿಂದ ಬಸ್ ಪ್ರಯಾಣಿಕರ ಸಹಿತ ಇತರ ವಾಹನಗಳಲ್ಲಿ ಸಂಚರಿಸುತ್ತಿರುವ ಜನರು ವಿವಿಧ ಕಡೆಗಳಿಗೆ ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುವಂತಾಗಿದೆ. ನಿನ್ನೆ ಮಧ್ಯಾಹ್ನ ಕೈಕಂಬದಿAದ-ಉಪ್ಪಳ ತನಕ ಭಾರೀ ವಾಹನಗಳ ದಟ್ಟಣೆ ಉಂಟಾಗಿದೆ. ಕೈಕಂಬದಿAದ ಉಪ್ಪಳ ಪೇಟೆಗೆ 5 ನಿಮಿಷದಲ್ಲಿ ತಲುಪುವ ದಾರಿಯÁಗಿದ್ದು, ವಾಹನಗಳ ದಟ್ಟಣೆಯಿಂದ 25 ನಿಮಿಷಗಳು ಬೇಕಾಗುತ್ತಿದೆ. ಇಲ್ಲಿ ಸರ್ವೀಸ್ ರಸ್ತೆ ಕೆಲಸ ಪೂರ್ತಿಗೊಳ್ಳದೆ ಇರುವುದು, ಹಾಗೂ ವಾಹನಗಳಿಗೆ ನಿಲುಗಡೆಗೊಳಿಸಲು ಸ್ಥಳವಕಾಶ ಇಲ್ಲದೆ ರಸ್ತೆ ಬದಿಯಲ್ಲಿಯೇ ನಿಲ್ಲಿಸುವುದು, ಮತ್ತು ಒಳರಸ್ತೆಯಿಂದ ವಾಹನಗಳು ಅಡ್ಡ ದಾಟುವ ವೇಳೆ ಇತರ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುತ್ತಿರುವುದೇ ಸಂಚಾರ ಸಮಸ್ಯೆಗೆ ಕಾರಣವೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ವಾಹನಗಳ ದಟ್ಟಣೆಯಿಂದ ಬಸ್‌ಗಳು ನಿಗದಿತ ಸಮಯಕ್ಕೆ ತಲುಪಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಖಾಸಗಿ ಬಸ್‌ಗಳು ತಲಪಾಡಿ ತನಕ ತೆರಳದೆ ಅರ್ಧದಿಂದಲೇ ಮರಳಬೇಕಾದ ಪರಿಸ್ಥಿತಿ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಸಂಬAಧಪಟ್ಟ ಹೆದ್ದಾರಿ ಇಲಾಖೆ ಅಧಿಕಾರಿಗಳು ಕೂಡಲೇ ಕಾಮಗಾರಿ ಮುಗಿಸಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page