ಉಪ್ಪಳ ಪೇಟೆಯಲ್ಲಿ ವಾಹನ ದಟ್ಟಣೆ: ಸಂಚಾರ ಸಮಸ್ಯೆ
ಉಪ್ಪಳ: ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ಈ ವೇಳೆ ಉಂಟಾಗುತ್ತಿರುವ ವಾಹನಗಳ ದಟ್ಟಣೆಯಿಂದ ತೀವ್ರ ಸಂಚಾರ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಫ್ಲೈಓವರ್ ಕೆಲಸ ಶೀಘ್ರ ಮುಗಿಸಿ ಸಂಚಾರ ಆರಂಭಿಸಿದರೆ ಮಾತ್ರವೇ ಇಲ್ಲಿನ ಸಂಚಾರ ಸಮಸ್ಯೆಗೆ ಪರಿಹಾರವಾಗಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿ ದ್ದಾರೆ. ಈಗ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಕಾಸರ ಗೋಡಿನಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಕೈಕಂಬ ದಿಂದ ಉಪ್ಪಳ ಪೇಟೆ ತನಕ ಅರ್ಧ ಗಂಟೆ ಅಥವಾ ಒಂದು ಗಂಟೆ ತನಕ ರಸ್ತೆ ತಡೆಯಲ್ಲಿ ಸಿಲುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಉಪ್ಪಳ ಹಾಗೂ ಪರಿಸರದ ವಾಹನಗಳು ಸಹಿತ ಎಲ್ಲಾ ವಾಹನಗಳೂ ಸರ್ವೀಸ್ ರಸ್ತೆಯಲ್ಲೇ ಸಂಚರಿಸುತ್ತಿರುವುದರಿಂದ ಈ ರೀತಿಯ ರಸ್ತೆ ತಡೆಗೆ ಕಾರಣವಾಗುತ್ತಿದೆ.
ಫ್ಲೈಓವರ್‌ನ ಕಾಮಗಾರಿ ಪೂರ್ತಿ ಗೊಂಡಿದ್ದು, ಅಂತಿಮ ಹಂತದ ಕೆಲಸ ಗಳು ಮಾತ್ರ ಬಾಕಿಯಿದೆ. ಈ ಹಿನ್ನೆಲೆ ಯಲ್ಲಿ ಕಾಮಗಾರಿ ಶೀಘ್ರ ಮುಗಿಸಿ ಫ್ಲೈ ಓವರ್‌ನಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿ ದ್ದಲ್ಲಿ ಉಪ್ಪಳ ಪೇಟೆಯ ವಾಹನ ಸಂಚಾರ ತಡೆಯನ್ನು ಪರಿಹರಿಸಬಹುದೆಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.