ಉಪ್ಪಳ ಬಳಿಯ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹಗೊಂಡು ಹೊಂಡ ಸೃಷ್ಟಿ: ವಾಹನ ಸಂಚಾರಕ್ಕೆ ಸಮಸ್ಯೆ

ಉಪ್ಪಳ: ರಾಷ್ಟಿçÃಯ ಹೆದ್ದಾರಿ ಅಭಿವೃದ್ದಿ ಕಾಮಗಾರಿ ಬಿರುಸಿನಿಂದ ನಡೆಯುತ್ತಿರುವಂತೆ ವಾಹನಗಳ ದಟ್ಟಣೆಯಿಂದ ಸಾರ್ವಜನಿಕರು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಉಪ್ಪಳ ಬಳಿಯ ಹಿದಾಯತ್ ಬಜಾರ್‌ನಲ್ಲಿ ನಿರ್ಮಾಣ ಹಂತದ ಹೆದ್ದಾರಿ ರಸ್ತೆಯಲ್ಲಿ ವ್ಯಾಪಕ ಮಳೆ ನೀರು ಕಟ್ಟಿ ನಿಂತು ಹೊಂಡ ಸೃಷ್ಟಿಯಾಗುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿರುವುದಾಗಿ ದೂರಲಾಗಿದೆ. ನೀರು ತುಂಬಿಕೊAಡ ರಸ್ತೆಯಿಂದ ನೂರಾರು ವಾಹನಗಳು ಆಮೆ ನಣಗೆಯಲ್ಲಿ ಸಂಚರಿಸಬೇಕಾಗುತ್ತಿದ್ದು, ಈ ವೇಳೆ ಭಾರೀ ಪ್ರಮಾಣದಲ್ಲಿ ದಟ್ಟಣೆ ಉಂಟಾಗುತ್ತಿದೆ. ಸಂಬAಧಪಟ್ಟ ಹೆದ್ದಾರಿ ಅಧಿಕಾರಿಗಳು ಹೊಂಡವನ್ನು ದುರಸ್ಥಿಗೊಳಿಸಿ ವಾಹನ ಸಂಚಾರ ಸುಗಮಗೊಳಿಸಲು ಒತ್ತಾಯಿಸಿದ್ದಾರೆ.

You cannot copy contents of this page