ಉರ್ದು ರಾಷ್ಟ್ರೀಯ ವಿಚಾರಗೋಷ್ಠಿ ಉಪ್ಪಳದಲ್ಲಿ ೯ರಂದು

ಉಪ್ಪಳ: ಉರ್ದು ದಿನಾಚರಣೆ ಹಾಗೂ ದೇಶೀಯ ವಿಚಾರಗೋಷ್ಠಿ ಈ ತಿಂಗಳ ೯ರಂದು ಉಪ್ಪಳ ಓಲ್ಡ್ ಹಿಂದೂಸ್ಥಾನಿ ಶಾಲೆಯಲ್ಲಿ ನಡೆಯಲಿದೆ. ಕಣ್ಣೂರು ವಿವಿಯ ಬಹುಭಾಷಾ ಅಧ್ಯಯನ ಕೇಂದ್ರ, ಹನಫಿ ವೆಲ್‌ಫೇರ್ ಸೊಸೈಟಿ, ಕೆ.ಟಿ.ಎಂ.ಎ ಎಂಬಿವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿವಿಯ ಸಿಂಡಿಕೇಟ್ ಸದಸ್ಯ ಡಾ. ಎ. ಅಶೋಕನ್ ಅದ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಎಕೆಎಂ ಅಶ್ರಫ್, ಡಾ. ಎ.ಎಂ ಶ್ರೀಧರನ್, ನಿಸಾರ್ ಅಹಮ್ಮದ್, ಡಾ. ಹಸನ್ ಶಿಹಾಬ್ ಹುದವಿ, ನಾಸರ್, ಅಬ್ದುಲ್ ರಶೀದ್, ಉಸ್ಮಾನ್, ಅಬ್ದುಲ್ ಸಲೀಂ, ಕೆ.ವಿ. ಕುಮಾರನ್, ಟಿ.ಎಂ. ಖುತ್ತರೇಶ್, ರವೀಂದ್ರನ್ ಪಾಡಿ ಭಾಗ ವಹಿಸುವರು. ಡಾ. ಆರ್.ಐ. ರಿಯಾಸ್, ಅಹಮ್ಮದ್‌ರನ್ನು ಗೌರವಿಸಲಾಗುವುದು.ವಿವಿಧ ವಿಷಯಗಳಲ್ಲಿ ಆಸಿಂ, ಕುಂಞಿಕಣ್ಣನ್, ಅಬ್ದುಲ್ ನಾಸರ್, ಇಸ್ಮತ್, ಪಜೀರ್ ಪ್ರಬಂಧ ಮಂಡಿಸುವರು.

You cannot copy contents of this page