ಉಳಿಯತ್ತಡ್ಕದಲ್ಲಿ ಶೋಚನೀಯ ಬಸ್ ನಿಲ್ದಾಣ: ಮುಸ್ಲಿಂ ಯೂತ್ ಲೀಗ್‌ನಿಂದ ಅಪಾಯ ಮುನ್ನೆಚ್ಚರಿಕೆ ಬೋರ್ಡ್ ಸ್ಥಾಪನೆ
ಉಳಿಯತ್ತಡ್ಕ: ಮಧೂರು ಪಂಚಾಯತ್ ಕಾರ್ಯಾಲಯದ ಸಮೀಪದಲ್ಲಿ ಜೀರ್ಣಗೊಂಡು ಅಪಾಯಕರವಾದ ಸ್ಥಿತಿಯಲ್ಲಿರುವ ಬಸ್ ನಿಲ್ದಾಣ ಕೇಂದ್ರ ಮುರಿದು ತೆಗೆಯದ ಕಾರಣ ಮುಸ್ಲಿಂ ಯೂತ್ ಲೀಗ್ ಅಪಾಯ ಮುನ್ನೆಚ್ಚರಿಕೆ ಬೋರ್ಡ್ ಸ್ಥಾಪಿಸಿದೆ.
ಬಸ್ ನಿಲುಗಡೆ ಕೇಂದ್ರವನ್ನು ಮುರಿದು ತೆಗೆಯಲು ಹಾಗೂ ಹೊಸತು ನಿರ್ಮಿಸಲು ಪಂಚಾಯತ್ ಬೋರ್ಡ್ ಸಭೆಯಲ್ಲಿ ತೀರ್ಮಾನವಾಗಿದ್ದರೂ ಇದುವರೆಗೆ ಯಾವುದೇ ಕ್ರಮ ಪಂಚಾಯತ್ ಆಡಳಿತ ಸಮಿತಿ ಕೈಗೊಂಡಿಲ್ಲವೆಂದು ಯೂತ್ ಲೀಗ್ ಆರೋಪಿಸಿದೆ. ಪಂಚಾಯತ್‌ನಿಂದ ನಿರಂತರ ಭ್ರಷ್ಟಾಚಾರ ಕಥೆಗಳು ಹೊರಬರುತ್ತಿರುವುದಲ್ಲದೆ, ಅಭಿವೃದ್ಧಿ ಕಾರ್ಯ ಇಲ್ಲಿ ನಡೆಯುತ್ತಿಲ್ಲವೆಂದು ಯೂತ್ ಲೀಗ್ ಆರೋಪಿಸಿದೆ. ಮಳೆ, ಬಿಸಿಲಿಗೆ ಅತ್ಯಂತ ಹೆಚ್ಚು ಜನರು ಆಶ್ರಯಿಸುವ ಬಸ್ ನಿಲ್ದಾಣ ಶೋಚನೀಯ ಸ್ಥಿತಿಯಲ್ಲಿದ್ದರೂ ಹೊಸ ತಂಗುದಾಣ ನಿರ್ಮಿಸದ ಆಡಳಿತ ಸಮಿತಿ ಜನರ ಸುರಕ್ಷಿತತೆ ಕಾರ್ಯದಲ್ಲಿ ಹೊಣೆಗೇಡಿತನದಿಂದ ವರ್ತಿಸುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಯೂತ್ ಲೀಗ್ ಮಧೂರು ಪಂಚಾಯತ್ ಸಮಿತಿ ನೇತೃತ್ವದಲ್ಲಿ ಮುನ್ನೆಚ್ಚರಿಕೆ ಬೋರ್ಡ್ ಸ್ಥಾಪಿಸಲಾಗಿದೆ.