ಲಕ್ನೋ: ಉತ್ತರಪ್ರದೇಶದಲ್ಲಿ ಮಾಧ್ಯಮ ಕಾರ್ಯಕರ್ತನನ್ನು ತಂಡವೊಂದು ಹೊಡೆದು ಕೊಲೆ ಗೈದ ಘಟನೆ ನಡೆದಿದೆ. ದಿಲೀಪ್ ಸೈನಿ (38) ಎಂಬವರು ಕೊಲೆ ಗೀಡಾದ ವ್ಯಕ್ತಿ. ಉತ್ತರಪ್ರದೇಶದ ಫತ್ತೇಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ದಿಲೀಪ್ ಹಾಗೂ ಬಿಜೆಪಿ ನೇತಾರ ಶಾಹಿದ್‌ಖಾನ್ ಎಂಬಿವರು ಹೋಟೆಲೊಂದರಲ್ಲಿ ಆಹಾರ ಸೇವಿಸುತ್ತಿದ್ದಾಗ ತಂಡ ವೊಂದು ದಿಲೀಪ್ ಸೈನಿ ಮೇಲೆ ಮಾರಕಾಯುಧಗಳಿಂದ ದಾಳಿ ನಡೆಸಿದೆ. ಅದನ್ನು ತಡೆಯಲು ಯತ್ನಿಸಿದಾಗ ಶಾಹಿದ್ ಖಾನ್ ಕೂಡಾ ಗಾಯಗೊಂಡಿದ್ದಾರೆ. ಘಟನೆ ತಕ್ಷಣ ಅಕ್ರಮಿಗಳು ಪರಾರಿಯಾ ಗಿದ್ದಾರೆ. ಗಾಯಾಳು ಗಳನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ತಲುಪಿಸಿದ್ದು, ಅಷ್ಟರೊಳಗೆ ದಿಲೀಪ್ ಸೈನಿ ಸಾವಿಗೀಡಾಗಿದ್ದಾರೆ. ಕೊಲೆಗಡುಕ ತಂಡದಲ್ಲಿ ೧೬ ಮಂದಿಯಿದ್ದರು. ಈ ಪೈಕಿ ನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
