ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ಮಂಜೇಶ್ವರ ಶಾಸಕ- ಕೆ. ಶ್ರೀಕಾಂತ್

ಹೊಸಂಗಡಿ : ಮೂಲಭೂತ ಸೌಕರ್ಯ ಕೂಡ ಕಲ್ಪಿಸಲಾಗದ ಮಂಜೇಶ್ವರ ಶಾಸಕರ ಕಾರ್ಯವೈಖರಿ ಖಂಡನಿಯ ಮತ್ತು ಸಂಶಯಾತ್ಮಕ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್ ಆರೋಪಿಸಿದರು. ಬಿಜೆಪಿ ಸದಸ್ಯತನ ಅಭಿಯಾನ, ಮಾಹಿತಿ ಕಾರ್ಯಗಾರ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ರಾಜ್ಯಸರಕಾರ ಕೇರಳಕ್ಕೆ ಶಾಪ, ಮಂಜೇಶ್ವರಕ್ಕೆ ಮಂಜೇಶ್ವರದ ಈಗಿನ ಶಾಸಕರೇ ಶಾಪ. ಮಿನಿ ಮಾಸ್ ಲೈಟ್‌ನ್ನು ತನ್ನ ಸಮುದಾಯದ ಧಾರ್ಮಿಕ ಕೇಂದ್ರ ಗಳ ಮುಂದೆ ಸ್ಥಾಪಿಸುವುದು ಮಾತ್ರ ಇವರ ಕಾಯಕ. ಇದಲ್ಲದೆ ಯಾವುದೇ ಅಭಿವೃದ್ಧಿ ಕಾರ್ಯ ಇವರ ಅವಧಿಯಲ್ಲಿ ನಡೆದಿಲ್ಲ ಎಂದು ಶ್ರೀಕಾಂತ್ ಆರೋಪಿಸಿದರು. ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ ಅಧ್ಯಕ್ಷತೆ ವಹಿಸಿದರರು.ಜಿಲ್ಲಾ ಕಾರ್ಯದರ್ಶಿ ಮಣಿಕಂಠ ರೈ, ಎಸ್.ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ ಕಯ್ಯಾರ್, ಮುಖಂಡರಾದ ಜಯಲಕ್ಷ್ಮಿ ಭಟ್, ಪುಷ್ಪ ಲಕ್ಷ್ಮಿ, ಯಾದವ ಬಡಾಜೆ, ಶೇಖರ ಕೋಡಿ, ಚಂದ್ರಾವತಿ ಬಾಯಾರು, ರಾಜ್ ಕುಮಾರ್ ಮೊರತ್ತಣೆ, ಚಂದ್ರಹಾಸ ಪೂಜಾರಿ, ನಿಶಾ ಭಟ್, ಆಶಾ ಪೆಲಪಾಡಿ, ಭಾಸ್ಕರ್ ಪೊಯ್ಯೆ, ಮಂಜುನಾಥ್ ಮುಳಿಗದ್ದೆ, ತುಳಸಿ ಕುಮಾರಿ, ನಾರಾಯಣ ತುಂಗಾ, ಮಮತಾ ಪೂಜಾರಿ, ಸುಮಂಗಲ ಪೊಸೋಟು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ ಭಟ್ ವಂದಿಸಿದರು.

You cannot copy contents of this page