ಎಂಟರ ಹರೆಯದ ಬಾಲಕಿಗೆ ಹಲ್ಲೆ: ತಂದೆ ವಿರುದ್ಧ ಕೇಸು

ಹೊಸದುರ್ಗ: ೮ರ ಹರೆಯದ ಬಾಲಕಿಗೆ ಪೈಶಾಚಿಕ ರೀತಿಯಲ್ಲಿ ಹಲ್ಲೆಗೈಯ್ಯುವ ದೃಶ್ಯಗಳು ವೈರಲ್ ಆಗುವುದರೊಂದಿಗೆ  ಘಟನೆ ಬಗ್ಗೆ ಕೇಸು ದಾಖಲಿಸಿ ತನಿಖೆ ನಡೆಸಲು  ಕಣ್ಣೂರು ರೂರಲ್ ಜಿಲ್ಲಾ ಪೊಲೀಸ್ ಅಧಿಕಾರಿ ಚೆರುಪುಳ ಪೊಲೀಸರಿಗೆ  ನಿರ್ದೇಶಿಸಿದ್ದಾರೆ.  ಪಯ್ಯನ್ನೂರು ಡಿವೈಎಸ್ಪಿ ಕೆ. ವಿನೋದ್ ಕುಮಾರ್‌ರಿಗೆ ಈ ನಿರ್ದೇಶ ನೀಡಲಾಗಿದೆ. ಇದರಂತೆ ಬಾಲಕಿಗೆ ಹಲ್ಲೆಗೈದ ತಂದೆ ಚೆರುಪುಳ ಮಲಾಂಕಡವು ನಿವಾಸಿಯಾದ  ಮಾಮಚ್ಚನ್ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚೆರುಪುಳದಲ್ಲಿ ಬಾಲಕಿ ಮೇಲೆ ಹಲ್ಲೆ ನಡೆದ ಘಟನೆ ನಡೆದಿರುವುದಾಗಿ ಹೇಳಲಾಗುತ್ತಿದೆ. ಮಾಮಚ್ಚನ್ ಹಾಗೂ ಪತ್ನಿ ಎರಡು ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆನ್ನಲಾ ಗಿದೆ. ೮ರ ಹರೆಯದ ಮಗಳು ಹಾಗೂ ೧೨ರ ಹರೆಯದ ಮಗ ಮಾಮಚ್ಚನ್‌ನೊಂದಿಗೆ ವಾಸಿಸುತ್ತಿ ದ್ದಾರೆ ಎಂದು ಹೇಳಲಾಗಿದೆ.

You cannot copy contents of this page