ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿ ಸೆರೆ
ಮಂಜೇಶ್ವರ: ಎಂಡಿಎಂಎ ಉಪಯೋಗಿಸುತ್ತಿದ್ದ ಮೂರು ಮಂದಿಯನ್ನು ಶನಿವಾರ ಮಂಜೇಶ್ವರ ಪೊಲೀಸರು ವಿವಿಧೆಡೆಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಶನಿವಾರ ಬೆಳಿಗ್ಗೆ ಹೊಸಂಗಡಿ ಬಸ್ ತಂಗುದಾಣದ ಬಳಿಯಿಂದ ಗುಡ್ಡೆ ಮಠ ನಿವಾಸಿ ಶರತ್ (32), ಮಧ್ಯಾಹ್ನ ಕುಂಜತ್ತೂರು ಬಸ್ ತಂಗುದಾಣ ಬಳಿಯಿಂದ ಕಾಡಿಯಾರ್ ನಿವಾಸಿ ಹನೀಫ್ ಎ. (42), ತಲಪಾಡಿ ಬಸ್ ತಂಗುದಾಣ ಬಳಿಯಿಂದ ಮಂಜೇಶ್ವರ ವಲಿಯವಳಪ್ ಬದರಿಯ ಮಸೀದಿ ಬಳಿಯ ಮೊಹಮ್ಮದ್ ಅಲಿಯಾಸ್ ಪಲ್ಲಕಳಂ (40)ನನ್ನು ಸೆರೆ ಹಿಡಿದಿರುವು ದಾಗಿ ಪೊಲೀಸರು ತಿಳಿಸಿದ್ದಾರೆ. ಇವ ರಿಂದ ಎಂಡಿಎಂಎ ಉಪಯೋಗಿಸುತ್ತಿದ್ದ ಉಪಕರಣಗಳನ್ನು ವಶಪಡಿಸಲಾಗಿದೆ. ಠಾಣೆಯ ಎಸ್‌ಐ ರತೀಶ್ ಕೆ.ಜಿ, ಎಎಸ್‌ಐ ಅತುಲ್ ರಾಮ್, ಚಾಲಕ ಪ್ರಶೋಬ್ ಗಸ್ತು ನಡೆಸುತ್ತಿದ್ದಾಗ ಸೆರೆ ಹಿಡಿಯಲಾಗಿದೆ.