ಎಂಡಿಎಂಎ ಕೈವಿರಿಸಿಕೊಂಡಾತ ಸೆರೆ
ಉಪ್ಪಳ: ಮಾರಕ ಮಾದಕ ವಸ್ತುವಾದ ಎಂಡಿಎಂಎ ಕೈವಶವಿರಿ ಸಿಕೊಂಡಿದ್ದ ವ್ಯಕ್ತಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ಉಪ್ಪಳ ಬಳಿಯ ಪತ್ವಾಡಿ ಕಲಂದರ್ ಮಂಜಿಲ್‌ನ ಅಬ್ದುಲ್ ರೌಫ್ ಯಾನೆ ?ಟಪ್ಪು ರೌಫ್ (39) ಬಂಧಿತ ವ್ಯಕ್ತಿ. ಈತನ ಕೈಯಿಂದ 0.26 ಗ್ರಾಂ ಎಂಡಿಎಂಎ ವಶಪಡಿಸಲಾಗಿದೆ. ನಿನ್ನೆ ಮಧ್ಯಾಹ್ನ 1.30ರ ವೇಳೆ ಪತ್ವಾಡಿ ರಸ್ತೆಯಲ್ಲಿ ಎಸ್.ಐ. ಉಮೇಶ್ ನೇತೃತ್ವದ ಪೊಲೀಸರು ಗಸ್ತು ನಡೆಸುತ್ತಿದ್ದ ವೇಳೆ ಅಬ್ದುಲ್ ರೌಫ್‌ನ ಮೇಲೆ ಸಂಶಯಗೊಂಡು ಈತನ ದೇಹ ತಪಾಸಣೆ ನಡೆಸಿದಾಗ ಪ್ಯಾಂಟ್‌ನ ಜೇಬಿನಲ್ಲಿ ಎಂಡಿಎಂಎ ಪತ್ತೆಯಾಗಿದೆ.