ಎಂಡಿಎಂಎ ಸಹಿತ ಇಬ್ಬರ ಸೆರೆ
ಕಾಸರಗೋಡು: ಭಾರೀ ಮಾದಕದ್ರವ್ಯವಾದ 1.24 ಗ್ರಾಂ ಎಂಡಿಎಂಎ ಸಹಿತ ಇಬ್ಬರನ್ನು ಕಾಸg ಗೋಡು ಪೊಲೀಸರು ಬಂಧಿಸಿದ್ದಾರೆ. ಕೂಡ್ಲು ಇಸ್ಸತ್ತ್‌ನಗರದ ಡಿ. ಕಬೀರ್ (37) ಮತ್ತು ಮಧೂರು ಹಿದಾಯ ತ್‌ನಗರದ ಕೆ.ಬಿ. ಅಹಮ್ಮದ್ ಅನೀಸ್ (37) ಬಂಧಿತ ಆರೋಪಿ ಗಳು. ಕೂಡ್ಲು ಗಣೇಶ್‌ನಗ ರದ ಬಸ್ ತಂಗುದಾಣ ಬಳಿ ಕಾರಿನಲ್ಲಿ ಶಂಕಾ ಸ್ಪದ ರೀತಿಯಲ್ಲಿ ಕಂಡ ಆರೋಪಿ ಗಳು ಪೊಲೀಸರನ್ನು ಕಂಡಾಕ್ಷಣ ಅಲ್ಲಿಂದ ಪರಾರಿಯಾಗಲೆ ತ್ನಿಸಿದ್ದಾರೆ. ಆಗ ಎಸ್‌ಐ ಪ್ರದೀಪ್ ಕುಮಾರ್ ನೇತೃತ್ವದ ಪೊಲೀಸರ ತಂಡ ಅವರನ್ನು ಬೆನ್ನಟ್ಟಿಕೊಂಡು ಹೋಗಿ ಸೆರೆಹಿಡಿದಿದೆ. ಆರೋಪಿಗಳ ಕಾರನ್ನು ಪರಿಶೀಲಿಸಿದಾಗ ಅದರ ಡ್ಯಾಶ್ ಬೋಕ್ಸ್‌ನೊಳಗೆ ಕವರಿನಲ್ಲಿ ತುಂಬಿಸಿಡಲಾಗಿದ್ದ ಎಂಡಿಎಂಎ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.