ಎಂಡಿಎಂಎ ಸಾಗಾಟ: ನ್ಯಾಯಾಂಗ ಬಂಧನದಲ್ಲೇ ಕಳೆಯುತ್ತಿದ್ದ ಆರೋಪಿಗೆ 10 ವರ್ಷ ಸಜೆ, ಜುಲ್ಮಾನೆ
ಕಾಸರಗೋಡು: ಮಾದಕ ವಸ್ತುವಾದ ಎಂಡಿಎಂಎ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಜಾಮೀನು ಲಭಿಸದೇ ಅಂದಿನಿಂದ ನ್ಯಾಯಾಂಗ ಬಂಧನದಲ್ಲೇ ಕಳೆಯು ತ್ತಿದ್ದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾ ಲಯ (ದ್ವಿತೀಯ)ದ ನ್ಯಾಯಧೀಶೆ ಕೆ. ಪ್ರಿಯಾ ಹತ್ತು ವರ್ಷ ಸಜೆ ಹಾಗೂ ಒಂದು ಲಕ್ಷರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಆರೋಪಿ ಚಟ್ಟಂಚಾಲ್ ತೆಕ್ಕಿಲ್ ಪಟ್ಟುವ ನಿವಾಸಿ ಟಿ.ಕೆ. ಮುಹಮ್ಮದ್ ಆಶಿಕ್ (25) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ.
2022 ಅಕ್ಟೋಬರ್ 21ರಂದು ಮಂಜೇಶ್ವರ ತಪಾಸಣಾ ಕೇಂದ್ರ ಬಳಿ ಬೆಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ್ನು ಅಂದು ಎಕ್ಸೈಸ್ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ಕೆ.ಕೆ. ಶಿಜಿಲ್ ಕುಮಾರ್ ನೇತೃತ್ವದ ಅಬಕಾರಿ ತಂಡ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿ ಮೊಹಮ್ಮದ್ ಆಶಿಕ್‌ನ ಬ್ಯಾಗ್‌ನೊಳಗೆ ಬಚ್ಚಿಡಲಾಗಿದ್ದ ೫೪ ಗ್ರಾಂ ಎಂಡಿಎಂಎ ಪತ್ತೆಹಚ್ಚಿತ್ತು. ಅದಕ್ಕೆ ಸಂಬಂಧಿಸಿ ಅಬಕಾರಿ ತಂಡ ಮೊಹಮ್ಮದ್ ಆಶಿಕ್‌ನನ್ನು ಬಂಧಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ನಂತರ ನ್ಯಾಯಾಂಗ ಬಂಧನಕ್ಕೊಳಗಾದ ಆರೋಪಿಗೆ ಜಾಮೀನು ನೀಡಲು ಯಾರೂ ಮುಂದೆ ಬಾರದ ಕಾರಣದಿಂದಾಗಿ ಆತ ಅಂದಿನಿಂದ ನ್ಯಾಯಾಂಗ ಬಂಧನದಲ್ಲೇ ಕಳೆಯಬೇಕಾಗಿ ಬಂದಿತ್ತು. ಅದಾದ ಬಳಿಕ ನ್ಯಾಯಾಲಯ ಆತನಿಗೆ ನಿನ್ನೆ ಈ ಶಿಕ್ಷೆ ವಿಧಿಸಿದೆ.
ಈ ಮಾದಕದ್ರವ್ಯ ಪ್ರಕರಣದ ಪ್ರಾಥಮಿಕ ತನಿಖೆಯನ್ನು ಅಂದು ಕಾಸರಗೋಡು ಅಸಿಸ್ಟೆಂಟ್ ಎಕ್ಸೈಸ್ ಅಬಕಾರಿ ಉಪ ಆಯುಕ್ತರಾಗಿದ್ದ ಎಸ್. ಕಷ್ಣ ಕುಮಾರ್ ನಡೆಸಿದ್ದರು.
ನಂತರದ ಅಬಕಾರಿ ಉಪ ಆಯುಕ್ತರಾಗಿದ್ದ ಜೋಯ್ ಜೋಸೆಫ್ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಮಂಜೇಶ್ವರದಲ್ಲಿ ಪ್ರಸ್ತುತ ಈ ಎಂಡಿಎಂಎ ಪತ್ತೆಹಚ್ಚಿದ ಅಬಕಾರಿ ತಂಡದಲ್ಲಿ ಎಕ್ಸೈಸ್ ಇನ್‌ಸ್ಪೆಕ್ಟರ್ ಜೆ. ಜೋಸೆಫ್, ಪ್ರಿವೆಂಟೀವ್ ಆಫೀ ಸರ್‌ಗಳಾದ ಟಿ. ಜಯರಾಜನ್, ಕೆ. ಪೀತಾಂಭರನ್, ಸಿಇಒಗಳಾದ ಮಹೇಶ.ಕೆ ಎಂಬವರು ಒಳಗೊಂಡಿ ದ್ದರು. ಪ್ರೋಸಿಕ್ಯೂಶನ್ ಪರ ನ್ಯಾಯ ವಾದಿಗಳಾದ ಜಿ. ಚಂದ್ರಮೋಹನ್ ಮತ್ತು ಎಂ. ಚಿತ್ರಕಲಾ ಎಂಬವರು ನ್ಯಾಯಾಲಯದಲ್ಲಿ ವಾದಿಸಿದ್ದರ.