ಎಂಡೋಸಲ್ಫಾನ್: ಅರ್ಜಿಗಳನ್ನು 7 ದಿನಗಳೊಳಗಾಗಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಆದೇಶ
ಕಾಸರಗೋಡು: ಎಂಡೋಸಲ್ಫಾನ್ ವೈದ್ಯಕೀಯ ಶಿಬಿರಕ್ಕೆ ಸಂಬಂಧಿಸಿ ಕಳೆದ ಐದು ವರ್ಷಗಳಿಂದ ನೆನೆಗುದಿ ಬಿದ್ದಿರುವ ಅರ್ಜಿಗಳಿಗೆ ಅದನ್ನು ಸಲ್ಲಿಸಿದವರ ಮನೆಗಳಿಗೆ ಸಂದರ್ಶಿಸಿ ಪರಿಶೀಲನೆ ನಡೆಸಿ ವರದಿಯನ್ನು ಏಳು ದಿನಗಳೊಳ ಗಾಗಿ ಸಲ್ಲಿಸುವಂತೆ ರಾಜ್ಯ ಸರಕಾರ ಆದೇಶ ನೀಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ಲಭಿಸಿದ ಅರ್ಜಿಗಳನ್ನು ಪರಿಶೀಲ ನೆಗಾಗಿ ಈಗಾಗಲೇ ಸಂಬಂಧಪಟ್ಟ ಗ್ರಾಮ ಕಚೇರಿಗಳಿಗೆ ಕಳುಹಿಸಿಕೊಡಲಾಗಿದೆ. ಈ ಪೈಕಿ ಒಂದು ಗ್ರಾಮ ಕಚೇರಿಗೆ ಮಾತ್ರವಾಗಿ ಸಾವಿರದಷ್ಟು ಅರ್ಜಿಗಳು ಲಭಿಸಿದೆ. ಇದರಂತೆ ಅರ್ಜಿ ಸಲ್ಲಿಸಿದವರ ಮನೆಗಳಿಗೆ ಸಂಬಂಧಪಟ್ಟ ಗ್ರಾಮ ಕಚೇರಿಯ ಗ್ರಾಮಾ ಧಿಕಾರಿ, ಪಂ. ಕಾರ್ಯ ದರ್ಶಿ, ಐಸಿಡಿ ಎಸ್ ಅಧಿಕಾರಿ ಮತ್ತು ಹೆಲ್ತ್ ಇನ್ಸ್‌ಪೆಕ್ಟರ್ ಗಳು, ನೇರವಾಗಿ ಸಂದರ್ಶಿಸಿ, ಪರಿಶೀಲನೆ ನಡೆಸಿ ವರದಿ ತಯಾರಿಸಿ ಸಲ್ಲಿಸಬೇ ಕಾಗಿದೆ. ಇದಕ್ಕಾಗಿ ಅತ್ತಿತ್ತ ಪ್ರಯಾಣಿ ಸಲಾದ ಪಂಚಾಯತ್‌ನ ವಾಹನ ಬಳಸ ಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.