ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳಿಗೆ ಶೀಘ್ರ ಪರಿಹಾರ-ಮುಖ್ಯಮಂತ್ರಿ
ತಿರುವನಂತಪುರ: ಕಾಸರಗೋ ಡಿನ ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳಿಗೆ ಪರಿಹಾರ ಕಾಣಲಾಗುವುದೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕಾಸರಗೋಡಿನ 1031 ಮಂದಿ ಸಂತ್ರಸ್ತರಿಗೆ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಮೂಲಕ ಸಹಾಯ ನೀಡಲಾಗುವುದೆಂದೂ ಅವರು ತಿಳಿಸಿದರು. ಕಾಸರಗೋಡು, ಇಡುಕ್ಕಿ ಪ್ಯಾಕೇಜ್‌ಗಳಿಗೆ ಅಗತ್ಯದ ಪರಿಗಣನೆ ನೀಡಲಾಗುವುದು. ಪ್ರತೀ ಜಿಲ್ಲೆಗೆ ತಲಾ 75 ಕೋಟಿ ರೂಪಾಯಿ ಮುಂಗಡ ಪತ್ರದಲ್ಲಿ ಮೀಸಲಿರಿಸಲಾಗಿದೆ ಯೆಂದು ಅವರು ತಿಳಿಸಿದರು. ಕ್ಷೇಮ ಪಿಂಚಣಿಗಳನ್ನು ಹೆಚ್ಚಿಸಲಾಗುವುದು, ವಿವಿಧ ಕ್ಷೇಮ ಪಿಂಚಣಿಗಳು ವಿತರಣೆಗೆ ಬಾಕಿಯಿದೆ, 1600 ರೂಪಾಯಿಯ ಐದು ಗಡುಗಳನ್ನು ನೀಡಲು ಬಾಕಿಯಿದ್ದು, ಇದನ್ನು ಕಾಲಕ್ರಮೇಣ ಕೊಟ್ಟು ಮುಗಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಕಾರುಣ್ಯ ಯೋಜನೆಯ ಮೊತ್ತವನ್ನು ಈ ಹಣಕಾಸು ವರ್ಷವೇ ವಿತರಿಸ ಲಾಗು ವುದು. ಪಿಂಚಣಿದಾರರಿಗೆ ಹಾಗೂ ನೌಕ ರರಿಗೆ ಎರಡು ಗಡು ಡಿಎ, ಟಿಎ ಮಂಜೂ ರು ಮಾಡಲಾಗುವುದೆಂದು ತಿಳಿಸಿದರು. ಇದೇ ವೇಳೆ ರಾಜ್ಯ ಭಾರೀ ಆರ್ಥಿಕ ಸಂದಿಗ್ಧತೆ ಯಲ್ಲಿದೆ. ಅರ್ಹವಾದ ಮೊತ್ತವನ್ನು ಮಂ ಜೂರು ಮಾಡಲು ಕೇಂದ್ರ ಸರಕಾರ ಸಿದ್ಧವಾಗುತ್ತಿಲ್ಲವೆಂದೂ ಅವರು ಹೇಳಿದ್ದಾರೆ.