ಎಂ.ಡಿ.ಎಂ.ಎ ಸಾಗಾಟ : ತಾಯಿ, ಮಗ ಸಹಿತ ನಾಲ್ವರ ಸೆರೆ
ಪಾಲಕ್ಕಾಡ್: ಮಾರಕ ಮಾದಕ ವಸ್ತುವಾದ ಎಂಡಿಎAಎ ಸಾಗಿಸುತ್ತಿದ್ದ ವೇಳೆ ತಾಯಿ, ಮಗ ಸಹಿತ ನಾಲ್ಕು ಮಂದಿಯನ್ನು ಅಬಕಾರಿ ಅಧಿಕಾರಿ ಗಳು ಸೆರೆಹಿಡಿದಿದ್ದಾರೆ. ತೃಶೂರು ನಿವಾಸಿಗಳೂ ಎರ್ನಾಕುಳಂನಲ್ಲಿ ವಾಸಿಸುವ ಅಶ್ವತಿ (39), ಮಗ ಶೋನ್ಸಣ್ಣಿ (20), ಕಲ್ಲಿಕೋಟೆ ನಿವಾಸಿಗಳಾದ ಮೃದುಲ್ (29), ಅಶ್ವಿನ್ಲಾಲ್ (24) ಎಂಬಿವರು ಸೆರೆಗೀಡಾದ ಆರೋಪಿಗಳು, ಇವರ ಕೈಯಿಂದ 12 ಗ್ರಾಂ ಎಂಡಿಎAಎ ವಶಪಡಿಸಲಾಗಿದೆ. ಬೆಂಗಳೂರಿನಿAದ ಕಾರಿನಲ್ಲಿ ಮಾದಕವಸ್ತು ಕೇರಳಕ್ಕೆ ಸಾಗಿಸುತ್ತಿದ್ದ ವೇಳ ವಾಳಯಾರ್ ಚೆಕ್ಪೋಸ್ಟ್ನಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದಾಗ ಇವರು ಸಿಕ್ಕಿಬಿದ್ದಿದ್ದಾರೆ. ಕಾರಿನಿಂದ ಮಾದಕವಸ್ತು ಮಾತ್ರೆ, ಅವುಗಳನ್ನು ಬಳಸಲಿರುವ ಉಪಕರಣಗಳನ್ನು ವಶಪಡಿಸಲಾಗಿ ದೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಎರ್ನಾಕುಳಂನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸುವ ಉದ್ದೇಶ ದಿಂದ ಇವರು ಮಾದಕವಸ್ತು ಸಾಗಿಸುತ್ತಿದ್ದಾರೆಂದು ತಿಳಿದುಬಂದಿದೆ. ಅಶ್ವತಿ ವರ್ಷಗಳಿಂದ ಮಾದಕವಸ್ತು ಸೇವಿಸುತ್ತಿದ್ದಾಳೆಂದೂ ಪೊಲೀಸರು ತಿಳಿಸಿದ್ದಾರೆ.