ಎಡನೀರು ಮಠದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾರೋಹಣದ ತೃತೀಯ ವಾರ್ಷಿಕೋತ್ಸವ
ಬದಿಯಡ್ಕ: ಎಡನೀರು ಮಠದ ಶ್ರೀ ಸ್ಚಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣದ ತೃತೀಯ ವಾರ್ಷಿಕೋತ್ಸವ ಗುರುವಾರ ಶ್ರೀಮಠದಲ್ಲಿ ವಿವಿಧ ಕಾರ್ಯಕ್ರಮ ಗಳೊಂದಿಗೆ ಜರಗಿತು. ಗಣಪತಿ ಹೋಮ, ಭಜನಾ ಸಂಕೀರ್ತನೆ, ಮಹಾಪೂಜೆ ಜರಗಿತು. ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರ ಶಿಷ್ಯೆಯರಿಂದ ನೃತ್ಯ ನಮನ ಪ್ರಸ್ತುತಗೊಂಡಿತು.
ಶಿಕ್ಷಣ ತಜ್ಞ ಮತ್ತು ಸಾಹಿತಿ ಡಾ. ಕೆ. ಇ. ರಾಧಾಕೃಷ್ಣ ಬೆಂಗಳೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ನಾಟ್ಯರಾಣಿ ಶಾಂತಲಾ ಪ್ರಶಸ್ತಿ ಪುರಸ್ಕೃತ ಹಿರಿಯ ನೃತ್ಯಗುರು ಉಳ್ಳಾಲ ಮೋಹನ ಕುಮಾರ್ ಅವರನ್ನು ಸನ್ಮಾನಿಸ ಲಾಯಿತು. ಖ್ಯಾತ ಯಕ್ಷಗಾನ ಕಲಾ ವಿದ ಎಂ.ಎಲ್. ಸಾಮಗ ಅಭಿನಂದನ ಭಾಷಣ ಮಾಡಿದರು. ಭರತನಾಟ್ಯ ಗುರುಗಳಿಗೇ ಪರಮಗುರುಗಳಾಗಿರುವ ಉಳ್ಳಾಲ್ ಮೋಹನ್ ಕುಮಾರ್ ಬಹುಸಂಖ್ಯೆ ಯಲ್ಲಿ ಶಿಷ್ಯ ವರ್ಗವನ್ನು ಹೊಂದಿ ಭರತನಾಟ್ಯ ಶೈಲಿಯನ್ನು ಗಟ್ಟಿಗೊಳಿಸುವ ಹಿರಿಯರು ಎಂದು ಅವರು ನುಡಿದರು. ಪ್ರಸಿದ್ಧ ಯಕ್ಷಗಾನ ಕಲಾವಿದ ರವಿರಾಜ ಪನೆಯಾಲ ಮಾನಪತ್ರ ವಾಚಿಸಿದರು. ಸನ್ಮಾನವನ್ನು ಸ್ವೀಕರಿಸಿ ಮೋಹನ್ ಕುಮಾರ್ ಉಳ್ಳಾಲ ಮಾತನಾಡಿ ಶ್ರೀಮಠದೊಂ ದಿಗಿನ ತನ್ನ ಒಡನಾಟವನ್ನು ಹಂಚಿಕೊಂಡರು. ಸ್ವರ್ಣ ಉದ್ಯಮಿ ಬಲರಾಮ ಆಚಾರ್ಯ ಪುತ್ತೂರು ಮಾತನಾಡಿದರು.
ಸ್ವಾಮೀಜಿ ಆಶೀರ್ವಚನವನ್ನು ನೀಡಿದರು. ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿ, ಕೆಯ್ಯೂರು ನಾರಾಯಣ ಭಟ್ ನಿರೂಪಿಸಿದರು. ಸೂರ್ಯನಾರಾಯಣ ಭಟ್ ಎಡನೀರು ವಂದಿಸಿದರು. ಯಕ್ಷಗಾನ ಬಯಲಾಟ ಗದಾಯುದ್ಧ ಪ್ರದರ್ಶನಗೊಂಡಿತು.