ಎಡರಂಗ ಬಾಯಾರು ಲೋಕಲ್ ಚುನಾವಣಾ ಸಮಿತಿ ಸಮಾವೇಶ
ಬಾಯಾರು: ಕೇರಳವನ್ನು ಆರ್ಥಿಕ ವಾಗಿ ದಿಗ್ಬಂಧನಗೊಳಿಸುವ ಕೇಂದ್ರದ ಬಿಜೆಪಿ ಸರಕಾರ ನಮಗೆ ಅರ್ಹತೆ ಇರುವ ತೆರಿಗೆಯ ಶೇಕಡಾ ವಾರು ತಡೆದಿದೆ. ಕೇರಳದ ಸರಕಾರ ವನ್ನು ಬುಡಮೇಲು ಗೊಳಿಸುವ ನಿಟ್ಟಿನಲ್ಲಿ ನಡೆಯುವ ಕೇಂದ್ರದ ಈ ಹುನ್ನಾರಕ್ಕೆ ಎದುರಾಗಿ ಕೇರಳದ ಜನತೆ ಉತ್ತರ ನೀಡಲಿದ್ದಾರೆ. ಬಿಜೆಪಿ ಜಾರಿಗೊಳಿ ಸುವ ಕಪ್ಪು ಕಾನೂನುಗಳ ವಿರುದ್ದ ಹಾಗೂ ಕೇರಳದ ಅಭಿವೃದ್ಧಿಯ ಪರವಾಗಿ ಯಾವುದೇ ಮಾತು ಆಡಲು ಕೇರಳದ ಯುಡಿಎಫ್ ಸಂಸದರÀÄ ತಯಾರಾಗುತ್ತಿಲ್ಲ.
ಬಿಜೆಪಿ ಹಾಗೂ ಯುಡಿಎಫ್‌ನ ಈ ನೀತಿ ವಿರುದ್ದ ಈ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರ ನೀಡಲಿದ್ದಾರೆ ಎಂದು ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಹೇಳಿದರು. ಎಡರಂಗ ಬಾಯಾರು ಲೋಕಲ್ ಚುನಾವಣಾ ಸಮಿತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಧಾಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ವಿನಯ್ ಕುಮಾರ್ ಬಾಯಾರು, ಸಿದ್ದೀಕ್ ಆವಳ, ರಾಮ ಚಂದ್ರ, ಅಬ್ದುಲ್ ಸತ್ತಾರ್, ಅಸ್ಪೀರ್, ರಹೀಂ ನಡುಮನೆ, ದಿನೇಶ್ವರಿ ನಾಗೇಶ್, ಝಾಕರೀಯ ಬಾಯಾರು, ಪುಷ್ಪರಾಜ್ ಡಿ, ರಾಬರ್ಟ್ ಫೆರವೋ, ಗಣೇಶ ಬಿ ಮಾತನಾಡಿದರು. ಪುರುಷೋತ್ತಮ ಬಳ್ಳೂರ್ ಸ್ವಾಗತಿಸಿದರು. ರಾಧಾಕೃಷ್ಣ ಭಟ್ (ಚೆಯರ್‌ಮÁ್ಯನ್) ಪುರುಷೋತ್ತಮ ಬಳ್ಳೂರು (ಕನ್ವೀನರ್) ಒಳಗೊಂಡ 101ಮಂದಿಯ ಚುನಾವಣಾ ಸಮಿತಿ ರೂಪೀಕರಿಸಲಾಯಿತು.