ಮುಳ್ಳೇರಿಯ: ಕಾರ್ಮಿಕರ ಸೌಲಭ್ಯಗಳನ್ನು ಕಸಿಯುತ್ತಿರುವುದಲ್ಲದೆ ಪಿಂಚಣಿ ಕೂಡಾ ನೀಡದೆ ಕಾರ್ಮಿ ಕರನ್ನು ದ್ರೋಹಿಸುವ ಎಡರಂಗ ಸರಕಾರದ ವಂಚನೆಯನ್ನು ಕಾರ್ಮಿಕರು ಪ್ರತಿಭಟಿಸಬೇಕೆಂದು ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ತಿಳಿಸಿದ್ದಾರೆ. ವಿಶ್ವಕರ್ಮ ಜಯಂತಿ ರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಂಗವಾಗಿ ಮುಳ್ಳೇರಿಯ, ಬದಿಯಡ್ಕ ವಲಯ ಗಳ ಸಂಯುಕ್ತಾಶ್ರಯದಲ್ಲಿ ಮುಳ್ಳೇರಿಯದಲ್ಲಿ ನಿನ್ನೆ ನಡೆದ ಸಾರ್ವಜನಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಗೀತಾ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಬಿಎಂಎಸ್ ಅಸಂಘಟಿತ ಯೂನಿಯನ್ ಜಿಲ್ಲಾಧ್ಯಕ್ಷ ಎಂ.ಕೆ. ರಾಘವನ್, ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಬಿ ನಾಯರ್, ಲೀಲಾಕೃಷ್ಣನ್ ಮೊದಲಾದವರು ಮಾತನಾಡಿದರು. ಕಾರ್ಮಿಕರ ಮೆರವಣಿಗೆಗೆ ಭಾಸ್ಕರನ್ ಪಡ್ಯತ್ತಡ್ಕ, ಪುರುಷೋತ್ತಮ ಕುಂಟಾ ರು, ಗೋಪಾಲಕೃಷ್ಣ ಬದಿಯಡ್ಕ, ರವಿ ಬದಿಯಡ್ಕ, ರಾಜ್‌ಮೋಹನ್, ಸದಾಶಿವನ್ ಮೊದಲಾದವರು ನೇತೃತ್ವದ ನೀಡಿದರು. ಬದಿಯಡ್ಕ ವಲಯ ಅಧ್ಯಕ್ಷ ಶಿವರಾಮ ಸ್ವಾಗತಿ ಸಿ, ಮುಳ್ಳೇರಿಯ ವಲಯ ಅಧ್ಯಕ್ಷ ಆನಂದ ಸಿ.ಎಚ್ ವಂದಿಸಿದರು.
