ಮಂಜೇಶ್ವರ: ಕೇರಳದ ಎಡರಂಗ ಸರಕಾರದ ವಿರುದ್ಧ ಮೂರನೇ ಹಂತದ ಜನಾಂದೋಲ ನಕ್ಕೆ ಕಾಂಗ್ರೆಸ್ ತೀರ್ಮಾನಿಸಿದ್ದು, ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಆಶ್ರಯದಲ್ಲಿ ನಾಳೆ ಹೊಸಂಗಡಿ ಪೇಟೆಯಲ್ಲಿ ಪ್ರತಿಭಟನಾ ಮೆರವಣಿಗೆ, ಸಭೆ ನಡೆಯಲಿದೆ. ಈ ಬಗ್ಗೆ ಬ್ಲೋಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ ಇವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರಗಿದ್ದು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್. ಉದ್ಘಾಟಿಸಿದರು. ಉಮ್ಮರ್ ಬೋರ್ಕಳ, ಹರ್ಷಾದ್ ವರ್ಕಾಡಿ, ದಾಮೋದರ, ಪುರುಷೋತ್ತಮ ಅರಿಬೈಲು, ಖಲೀಲ್ ಬಜಾಲ್, ಶಾಂತಾ ಆರ್. ನಾಯ್ಕ್, ಫ್ರಾನ್ಸಿಸ್ ಡಿ’ಸೋಜಾ, ಸತೀಶ್ ಅಡಪ್ಪ, ಇಬ್ರಾಹಿಂ ಸಹಿತ ಹಲವರು ಉಪಸ್ಥಿತರಿದ್ದರು. ಈ ವೇಳೆ ಇತ್ತೀಚೆಗೆ ನಿಧನರಾದ ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ಸರಸ್ವತಿ ಶೆಟ್ಟಿಗಾರ್‌ರಿಗೆ ಸಂತಾಪ ಸೂಚಿಸಲಾಯಿತು.
