ಎಡಿಎಂ ಆತ್ಮಹತ್ಯೆ ಪ್ರಕರಣ: ಪಿ.ಪಿ. ದಿವ್ಯಾರಿಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ತಲಶ್ಶೇರಿ: ಕಣ್ಣೂರು ಹೆಚ್ಚುವರಿ ಜಿಲ್ಲಾ ಮೆಜಿಸ್ಟ್ರೇಟ್ (ಎಡಿಎಂ) ನವೀನ್‌ಬಾಬುರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆತ್ಮಹತ್ಯಾ ಪ್ರೇರಣೆ ಪ್ರಕರಣದಲ್ಲಿ ಸಿಲುಕಿದ ಕಣ್ಣೂರು ಜಿಲ್ಲಾ ಪಂಚಾಯತ್‌ನ ಈ ಹಿಂದಿನ ಅಧ್ಯಕ್ಷೆ ಪಿ.ಪಿ. ದಿವ್ಯಾ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಇಂದು ಬೆಳಿಗ್ಗೆ ವಜಾಗೈದು ಅವರಿಗೆ ಜಾಮೀನು ನಿರಾಕರಿಸಿ ತೀರ್ಪು ನೀಡಿದೆ.

ಆತ್ಮಹತ್ಯಾ ಪ್ರೇರಣೆ ಪ್ರಕರಣದಲ್ಲಿ ಸಿಲುಕಿದ ಪಿ.ಪಿ. ದಿವ್ಯಾ ಬಳಿಕ ದಿಢೀರ್  ಅಗೋಚರರಾಗಿದ್ದರು. ಅವರನ್ನು ಈ ತನಕ ಪತ್ತೆಹಚ್ಚಲು ಪೊಲೀಸರಿಗೂ ಸಾಧ್ಯವಾಗಿ ರಲಿಲ್ಲ. ಮಾತ್ರವಲ್ಲ ಈ ಮಧ್ಯೆ ಅವರು ನಿರೀಕ್ಷಣಾ ಜಾಮೀನು ಕೋರಿ ತಲಶ್ಶೇರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಾಲಯ ವಜಾಗೈದು ಜಾಮೀನು ನಿರಾಕರಿಸಿದೆ. ಇದರಿಂದಾಗಿ ಈತನಕ ತಲೆಮರೆಸಿಕೊಂಡಿದ್ದ ದಿವ್ಯಾರ ಬಂಧನ ಸನ್ನಿಹಿತವಾಗಿದೆ. ಅದನ್ನು ಮುಂದಕ್ಕೆ ಕಂಡು ಕೊಂಡು ಅವರು ಇಂದು ಪೊಲೀಸರ ಮುಂ ದೆ ಶರಣಾಗುವ ಸಾಧ್ಯತೆಯೂ ಇದೆ.

You cannot copy contents of this page