ಎಡಿಎಂ ನವೀನ್‌ಬಾಬು ಆತ್ಮಹತ್ಯೆ: ಸಿಬಿಐ ತನಿಖೆ ಆಗ್ರಹಿಸಿ ಕುಟುಂಬ ಸುಪ್ರೀಂಕೋರ್ಟ್‌ಗೆ ಅರ್ಜಿ
ಕಣ್ಣೂರು: ಎಡಿಎಂ ಆಗಿದ್ದ ಕೆ. ನವೀನ್‌ಬಾಬುರವರ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಆಗ್ರಹಿಸಿ ಕುಟುಂಬ ನ್ಯಾಯಾಲಯವನ್ನು ಸಮೀಪಿಸಿದೆ. ಈಗ ನಡೆಯುತ್ತಿರುವ ತನಿಖೆಯಲ್ಲಿ ವಿಶ್ವಾಸವಿಲ್ಲವೆಂದು ಸೂಚಿಸಿ ನವೀನ್ ಬಾಬುರವರ ಪತ್ನಿ ಮಂಜುಷ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಬೇಕೆಂಬ ಕುಟುಂಬದ ಬೇಡಿಕೆಯನ್ನು ಹೈಕೋ ರ್ಟ್ ಈ ಮೊದಲು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟನ್ನು ಸಮೀಪಿಸಲಾಗಿದೆ.
ಕಳೆದ ಅಕ್ಟೋಬರ್ 15ರಂದು ನವೀನ್ ಬಾಬು ವಾಸ ಸ್ಥಳದಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಕರಣದ ತನಿಖೆ ನಡೆಸಿ ತನಿಖಾ ತಂಡ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು. ಕಣ್ಣೂರಿನ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸಿಪಿಎಂ ನೇತಾರೆಯಾಗಿರುವ ಪಿ.ಪಿ. ದಿವ್ಯಾ ಈ ಪ್ರಕರಣದ ಏಕ ಆರೋಪಿ. ಬೀಳ್ಕೊಡುಗೆ ಸಮಾರಂಭದಂದು ದಿವ್ಯಾ ಹೊರಿಸಿದ ಆರೋಪಗಳು ನವೀನ್ ಬಾಬುರವರನ್ನು ಮಾನಸಿಕವಾಗಿ ಕುಗ್ಗಿಸಿತ್ತು. ಇದು ಆತ್ಮಹತ್ಯೆಗೆ ಪ್ರೇರಣೆಯಾಗಿತ್ತೆಂದು ಹೇಳಲಾಗಿತ್ತು. ವೀಡಿಯೋ ಚಿತ್ರೀಕರಿ ಸಲು ಸ್ಥಳೀಯ ಚಾನೆಲ್‌ನ್ನು ಉಪ ಯೋಗಿಸಿರುವುದು ನವೀನ್‌ಬಾಬುರನ್ನು ಅಪಮಾನಗೈಯ್ಯಲು ದಿವ್ಯಾ ಯೋಜನಾಬದ್ಧವಾಗಿ ನಡೆಸಿದ ಕೃತ್ಯವೆಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.