ಎಡಿಜಿಪಿಯನ್ನು ಹುದ್ದೆಯಿಂದ ದೂರ ನಿಲ್ಲಿಸದೆ ನಡೆಸುವ ತನಿಖೆ ವ್ಯರ್ಥ-ಕೆ.ಇ. ಇಸ್ಮಾಯಿಲ್

ಪಾಲಕ್ಕಾಡ್: ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್‌ಗೆ ಸಂಬಂಧಪಟ್ಟ ವಿಷಯದಲ್ಲಿ ಸರಕಾರ ಕೈಗೊಂಡ ನಿಲುವಿನ ವಿರುದ್ಧ ಹಿರಿಯ ಸಿಪಿಐ ನೇತಾರ ಕೆ.ಇ. ಇಸ್ಮಾಯಿಲ್  ಪ್ರತಿಕ್ರಿಯಿಸಿದ್ದಾರೆ. ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್‌ರನ್ನು ಹುದ್ದೆಯಿಂದ ದೂರ ಉಳಿಸಿ ತನಿಖೆ ನಡೆಸಬೇಕೆಂದು ಅವರು ಖಾಸಗಿ ಟಿವಿ ಚ್ಯಾನೆಲೊಂದಕ್ಕೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಜಿತ್ ಕುಮಾರ್‌ರನ್ನು ಹುದ್ದೆಯಿಂದ ದೂರ ನಿಲ್ಲಿಸದೆ ನಡೆಸುವ ತನಿಖೆಯಲ್ಲಿ ಯಾವುದೇ ಪ್ರಯೋಜನವಿಲ್ಲ. ಆರ್‌ಎಸ್‌ಎಸ್ ನೇತಾರರನ್ನು ಅವರು ಕಂಡಿರುವುದು ಗಂಭೀರ ವಿಷಯವೆಂದು ಇಸ್ಮಾಯಿಲ್ ತಿಳಿಸಿದ್ದಾರೆ.  ಎಡಿಜಿಪಿಯನ್ನು ನಿನ್ನೆ  ಸೇರಿದ ಎಲ್‌ಡಿಎಫ್ ಸಭೆಯ ಬಳಿಕ ಹುದ್ದೆಯಿಂದ ದೂರ ಉಳಿಸಬಹು ದೆಂದು  ನಿರೀಕ್ಷಿಸಲಾಗಿತ್ತು. ಆದರೆ ಹಾಗೆ ನಡೆದಿಲ್ಲ.  ಎಡರಂಗದ ಸಿಪಿಐ ಸಹಿತ ಘಟಕ ಪಕ್ಷಗಳ  ಅಭಿಪ್ರಾಯ ಎಡಿಜಿಪಿಯನ್ನು ಆ ಹುದ್ದೆಯಿಂದ ದೂರ ನಿಲ್ಲಿಸಬೇಕಾಗಿದೆ ಎಂಬುದೇ ಆಗಿದೆ. ಎಡಿಜಿಪಿಯನ್ನು ದೂರ ನಿಲ್ಲಿಸಿ ತನಿಖೆ ನಡೆಸಿದರೆ ಮಾತ್ರವೇ ಸರಕಾರದ ಮೇಲಿನ ವಿಶ್ವಾಸ ಹೆಚ್ಚಬಹುದು. ಆದರೆ ಸರಕಾರ ಯಾಕಾಗಿ ಹೀಗೆ ನಡೆದುಕೊಂಡಿದೆ ಯೆಂದು ತಿಳಿದಿಲ್ಲವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

RELATED NEWS

You cannot copy contents of this page