ಎಡಿಜಿಪಿ-ಆರ್‌ಎಸ್‌ಎಸ್ ಭೇಟಿ :ತನಿಖೆಗೆ ಮುಖ್ಯಮಂತ್ರಿ ಆದೇಶ
ತಿರುವನಂತಪುರ: ರಾಜ್ಯದ ರಾಜಕೀಯವನ್ನು ಅಲ್ಲೋಲಕಲ್ಲೋ ಲಗೊಳಿಸಿರುವ ಎಡಿಜಿಪಿ ಅಜಿತ್ ಕುಮಾರ್ ತೃಶೂರು ಮತ್ತು ತಿರುವನಂತಪುರದಲ್ಲಾಗಿ ಎರಡು ಬಾರಿ ಇಬ್ಬರು ಆರ್‌ಎಸ್‌ಎಸ್ ನೇ ತಾರರೊಂದಿಗೆ ನಡೆಸಿದ ಸಮಾ ಲೋಚನೆಯ ಹಿನ್ನೆಲೆ ಬಗ್ಗೆ ಸಮಗ್ರ ತನಿಖೆ ನಡೆಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಂದು ಬೆಳಿಗ್ಗೆ ಆದೇಶ ನೀಡಿದ್ದಾರೆ. ಇದರಂತೆ ತನಿಖೆಗಾಗಿ ವಿಶೇಷ ತಂಡವನ್ನು ನೇಮಿಸಲಾಗು ವುದೆಂದು ಅವರು ತಿಳಿಸಿದ್ದಾರೆ. ಎಡಿಜಿಪಿ, ಆರ್‌ಎಸ್‌ಎಸ್ ನೇತಾರರನ್ನು ಭೇಟಿಯಾದ ಹಿನ್ನೆಲೆ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಎಡರಂಗದ ಪ್ರಧಾನ ಘಟಕ ಪಕ್ಷವಾಗಿರುವ ಸಿಪಿಐ ಸೇರಿದಂತೆ ವಿಪಕ್ಷಗಳು ಸರಕಾರದ ಮೇಲೆ ನಿರಂತರ ಒತ್ತಡ ಹೇರಿತ್ತು. ಅದಕ್ಕೆ ಮಣಿದ ಮುಖ್ಯಮಂತ್ರಿ ಕೊನೆಗೂ ಇಂದು ಬೆಳಿಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆಗೆ ಆದೇಶ ನೀಡಿರುವುದರನ್ನು ವಿಪಕ್ಷಗಳು ಸ್ವಾಗತಿಸಿದ್ದರೂ ತನಿಖೆ ಕೇವಲ ಒಂದು ಪ್ರಹಸನವಾಗಬಾರದೆಂದು ಅಭಿಪ್ರಾಯವನ್ನು ಮುಂದಿರಿಸಿದೆ.