ಎಣ್ಮಕಜೆ ಕೃಷಿ ಭವನ ಆಶ್ರಯದಲ್ಲಿ ಕೃಷಿ ಸಂತೆ, ಸಭೆ
ಪೆರ್ಲ: ಎಣ್ಮಕಜೆ ಕೃಷಿ ಭವನ ನೇತೃತ್ವದಲ್ಲಿ ಪಂಚಾಯತ್ ಸಭಾಂಗಣದಲ್ಲಿ ನಾಟಿ ಕಾರ್ಯಕ್ರಮ, ಸಂತೆ, ಕೃಷಿ ಸಭೆ ನಡೆಸಲಾಯಿತು. ಪಂಚಾಯತ್ ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದು, ಪಂ. ಅಧ್ಯಕ್ಷ ಜೆ.ಎಸ್. ಸೋಮಶೇಖರ್ ಉದ್ಘಾಟಿಸಿದರು. ಕೃಷಿ ಅಧಿಕಾರಿ ಬಿ.ಕೆ. ನಿತಿನ್ ಪುಷ್ಪ ಕೃಷಿ ಪರಿಪಾಲನೆ, ಮಣ್ಣು ತಪಾಸಣೆ ತಿಳುವಳಿಕೆ ತರಗತಿ ನಡೆಸಿದರು. ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ರೂಪವಾಣಿ ಆರ್. ಭಟ್ ಚೆಂಡು ಹೂ ಬೀಜವನ್ನು ಕೃಷಿಕರಿಗೆ ಉಚಿತವಾಗಿ ವಿತರಿಸಿದರು. ತರಕಾರಿ ಬೀಜಗಳನ್ನು ಕೃಷಿ ಇಲಾಖೆ ಮೂಲಕ ನೀಡಲಾಯಿತು. ಕೃಷಿ ಅಸಿಸ್ಟೆಂಟ್ ಅಬ್ದುಲ್‌ಕುಂಞಿ ಕೆ. ವಂದಿಸಿದರು.