ಎನ್‌ಸಿಡಿಸಿ ರೀಜ್ಯನಲ್ ಪ್ರಶಸ್ತಿ ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ
ಕುಂಬಳೆ: ಕಾಸರಗೋಡು ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘಕ್ಕೆ ಸೇವಾ ರಂಗದಲ್ಲಿ ಉತ್ತಮ ಸಹಕಾರಿ ಸಂಘಗಳಿಗಿರುವ ಎನ್‌ಸಿಡಿಸಿ ರೀಜ್ಯನಲ್ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ಆಸ್ಪತ್ರೆ, ಟೂರಿಸಂ, ಶಿಕ್ಷಣ ಎಂಬೀ ವಲಯಗಳಲ್ಲಿ ಕಾರ್ಯಾಚರಿಸುತ್ತಿರುವ ಉತ್ತಮ ಸಹಕಾರಿ ಸಂಘಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದು, ಇದರಲ್ಲಿ ಜಿಲ್ಲಾ ಸಹಕಾರಿ ಆಸ್ಪತ್ರೆ ಸಂಘವೂ ಆಯ್ಕೆಯಾಗಿದೆ. ಕುಂಬಳೆ ಕೇಂದ್ರವಾಗಿ ಕಾರ್ಯಾಚರಿಸುವ ಸಂಘದ ಅಧೀನದಲ್ಲಿ ಕುಂಬಳೆಯ ಜಿಲ್ಲಾ ಸಹಕಾರಿ ಆಸ್ಪತ್ರೆ, ಚೆಂಗಳದ ಇ.ಕೆ. ನಾಯನಾರ್ ಸ್ಮಾರಕ ಸಹಕಾರಿ ಆಸ್ಪತ್ರೆ, ಮುಳ್ಳೇರಿಯದ ಕೋ ಆಪರೇಟಿವ್ ಮೆಡಿಕಲ್ ಸೆಂಟರ್ ಎಂಬೀ ೩ ಆಸ್ಪತ್ರೆಗಳು ಕಾರ್ಯಾಚರಿಸು ತ್ತಿದೆ. ಒಂದೇ ಸಂಘದ ಅಧೀನದಲ್ಲಿ ಮೂರು ಆಸ್ಪತ್ರೆಗಳು ಕಾರ್ಯಾಚರಿಸುತ್ತಿ ರುವ ರಾಜ್ಯದ ಏಕ ಸಂಘವಾಗಿದೆ ಇದು. ಕಳೆದ ಎರಡು ವರ್ಷಗಳಲ್ಲೂ ರಾಜ್ಯದ ಉತ್ತಮ ಸಹಕಾರಿ ಆಸ್ಪತ್ರೆಗಳಿಗಿರುವ ತೃತೀಯ ಸ್ಥಾನ ಲಭಿಸಿತ್ತು. ತಿರುವನಂತಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಹಕಾರಿ ಇಲಾಖೆ ಸಚಿವ ವಿ.ಎನ್. ವಾಸವನ್, ಆಸ್ಪತ್ರೆಯ ಅಧ್ಯಕ್ಷ ಪಿ. ರಘುದೇವನ್, ನಿರ್ದೇಶಕ ರಾದ ಸಿ.ಎ. ಸುಬೈರ್, ಜಯೇಂ ದ್ರನ್, ಕಾರ್ಯದರ್ಶಿ ಪ್ರದೀಪ್ ಕುಮಾರ್, ಡಿ.ಎನ್. ರಾಧಾಕೃಷ್ಣನ್ ಎಂಬಿವರು ಭಾಗವಹಿಸಿದರು.