ಎರಡು ದಿನಗಳಲ್ಲಿ ಹಲವೆಡೆಗಳ ಆರಾಧನಾಲಯಗಳಿಂದ ಭಾರೀ ಕಳವು; ಮಾನ್ಯ ಶ್ರೀ ಅಯ್ಯಪ್ಪ ಮಂದಿರದಿಂದ 6 ಲಕ್ಷ ರೂ.ಗಳ ಬೆಳ್ಳಿಯ ಛಾಯಾಚಿತ್ರ,ನೆಲ್ಲಿಕಟ್ಟೆ ಶ್ರೀ ನಾರಾಯಣಗುರು ಮಂದಿರದಿಂದ ಹಣ ಕಳವು
ಬದಿಯಡ್ಕ: ಕ್ಷೇತ್ರ ಉತ್ಸವಗಳು, ಕಳಿಯಾಟ ಆರಂಭಗೊಂಡ ಬೆನ್ನಲ್ಲೇ ಕಾಸರಗೋಡಿನ ವಿವಿಧೆಡೆ ಕಳ್ಳರು ಬೀಡು ಬಿಟ್ಟಿರುವುದಾಗಿ ಸಂಶಯಿಸ ಲಾಗಿದೆ. ಕಳೆದ ಎರಡು ದಿನಗಳಲ್ಲಾಗಿ ಜಿಲ್ಲೆಯಲ್ಲಿ ಆರಾಧನಾಲಯಗಳು, ವ್ಯಾಪಾರಿ ಸಂಸ್ಥೆಯಿಂದ ಕಳವು ನಡೆದಿದೆ. ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿ ಯಲ್ಲಿ ನಿನ್ನೆ ರಾತ್ರಿ ಎರಡು ಕಡೆಗಳಲ್ಲಿ ಕಳವು ನಡೆದಿದೆ. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರ ಹಾಗೂ ನೆಲ್ಲಿಕಟ್ಟೆ ಶ್ರೀ ನಾರಾಯ ಣಗುರು ಮಂದಿರದಿಂ ದ ಕಳವು ನಡೆದಿದೆ. ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ಬೀಗ ಮುರಿದು ಒಳನುಗ್ಗಿದ ಕಳ್ಳರು ಗರ್ಭ ಗುಡಿಯಲ್ಲಿದ್ದ ಶ್ರೀ ಅಯ್ಯಪ್ಪ ದೇವರ ಬೆಳ್ಳಿಯ ಛಾಯಾಚಿತ್ರ ಹಾಗೂ ಎರಡು ಕಾಣಿಕೆ ಹುಂಡಿಗಳಲ್ಲಿನ ಹಣವನ್ನು ದೋಚಿದ್ದಾರೆ. ಬೆಳ್ಳಿಯ ಛಾಯಾಚಿತ್ರಕ್ಕೆ ಆರು ಲಕ್ಷ ರೂಪಾಯಿ ಮೌಲ್ಯವಿದೆ ಯೆಂದು ಮಂದಿರ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ನೆಲ್ಲಿಕಟ್ಟೆಯಲ್ಲಿ ಶ್ರೀ ನಾರಾಯಣಗುರು ಮಂದಿರದಿಂದ ೨೫ ಸಾವಿರ ರೂಪಾಯಿ ನಗದು, 2 ಕಾಣಿಕೆ ಹುಂಡಿಗಳಲ್ಲಿದ್ದ ಹಣವನ್ನು ನಿನ್ನೆ ರಾತ್ರಿ ಕಳ್ಳರು ದೋಚಿದ್ದಾರೆ. ಮಂದಿರದ ಗರ್ಭಗುಡಿ ಹಾಗೂ ಕಚೇರಿ ಕೊಠಡಿಯ ಬೀಗ ಮುರಿದು ಒಳನುಗ್ಗಿ ಈ ಕಳವು ನಡೆಸಲಾಗಿದೆ. ಕಳವು ಬಗ್ಗೆ ಲಭಿಸಿದ ದೂರಿನಂತೆ ಈ ಎರಡೂ ಸ್ಥಳಗಳಿಗೆ ಬದಿಯಡ್ಕ ಪೊಲೀಸರು ತಲುಪಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ತಲುಪಿ ಸಮಗ್ರ ತನಿಖೆ ನಡೆಸಲಿದೆಯೆಂದು ತಿಳಿದುಬಂದಿದೆ. ಪೊಯಿನಾಚಿ ಶ್ರೀ ಅಯ್ಯಪ್ಪ ಕ್ಷೇತ್ರದಿಂ ದಲೂ ನಿನ್ನೆ ರಾತ್ರಿ ಕಳವು ನಡೆದಿದೆ. ಕ್ಷೇತ್ರಕ್ಕೆ ನುಗ್ಗಿದ ಕಳ್ಳರು 8 ಗ್ರಾಂ ಚಿನ್ನ ಹಾಗೂ ಸಿಸಿ ಟಿವಿಯ ಹಾರ್ಡ್ ಡಿಸ್ಕ್ ಕಳವು ನಡೆಸಿದ್ದಾರೆ. ಇಲ್ಲಿ ಕೂಡಾ ಪೊಲೀಸರು ತನಿಖೆಗೆ ಚಾಲನೆ ನೀಡಿದ್ದಾರೆ.