ಎರಡು ದಿನದ ಹಿಂದೆ ಕೊಲ್ಲಿಯಿಂದ ತಲುಪಿದ ಯುವಕ ನಿಧನ
ಕಾಸರಗೋಡು: ಎರಡು ದಿನದ ಹಿಂದೆ ದುಬಾಯಿಂದ ಊರಿಗೆ ತಲುಪಿದ ಕಳನಾಡು ನಿವಾಸಿ ಹೃದಯಾಘಾತದಿಂದ ನಿಧನ ಹೊಂದಿದರು. ಚಾತಂಗೈ ಮಾಣಿ ನಿವಾಸಿ ದಿ| ಅಬ್ದುಲ್ಲ ಬಿಫಾತಿಮ ದಂಪತಿ ಪುತ್ರ ಇಬ್ರಾಹಿಂ (48) ಮೃತಪಟ್ಟವರು. ದುಬಾಯ ಅಂಗಡಿಯೊಂದರಲ್ಲಿ ಸೇಲ್ಸ್ಮೆನ್ ಆಗಿದ್ದರು. ಮೃತರು ಪತ್ನಿ ಸುಮಯ್ಯ ಪಾಕ್ಯಾರ, ಮಕ್ಕಳಾದ ಇರ್ಫಾನ್, ಫಮೀದ, ಸಹೋದರರಾದ ಮುಹಮ್ಮದ್ ಕುಂಞಿ, ಸಲಾಂ, ಶಂಸುದ್ದೀನ್, ಸಹೋದರಿಯರಾದ ಅಫ್ಸತ್, ನಸೀಮ, ರುಖಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.