ಎರಡು ವರ್ಷದ ಮಗು ಬಾವಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ: ಕೊಲೆ ಶಂಕೆ; ಹೆತ್ತವರು, ಮಾವ ಪೊಲೀಸ್ ಕಸ್ಟಡಿಗೆ
ತಿರುವನಂತಪುರ: ಎರಡು ವರ್ಷದ ಮಗು ಮನೆ ಪಕ್ಕದ ಆವರಣ ಹೊಂದಿ ರುವ ಬಾವಿಯಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತಿರುವನಂತಪುರ ಬಾಲರಾಮ ಪುರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಇದು ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಮಗುವಿನ ಹೆತ್ತರು ಹಾಗೂ ಮಾವನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿ ತೊಡಗಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿ ಕೈಸೇರಿದ ಬಳಿಕವಷ್ಟೇ ಸಾವಿನ ಕಾರಣ ತಿಳಿಯಲು ಸಾಧ್ಯವೆಂದು ಪೊಲೀಸರು ತಿಳಿಸಿದರು. ಬಾಲಾರಾಮಪುರದ ಗೀತು- ಶ್ರೀಜಿತ್ ದಂಪತಿ ಪುತ್ರ ಪುತ್ರಿ ದೇವೇಂದು (2) ಸಾವನ್ನಪ್ಪಿದ ಮಗು. ಇಂದು ಮುಂಜಾನೆ ಮನೆಯಿಂದ ದಿಢೀರ್ ಆಗಿ ಮಗು ನಾಪತ್ತೆಯಾಗಿದೆ ಎಂದು ಮನೆಯವರು ಹೇಳಿದ್ದು, ಅದರಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಆಗಮಿಸಿ ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಮಗುವಿನ ಮೃತದೇಹ ಮನೆ ಪಕ್ಕದ ಆವರಣ ಹೊಂದಿರುವ ಬಾವಿಯಲ್ಲಿ ಪತ್ತೆಯಾಗಿದೆ. ಮಗು ಮಾವನ ಕೊಠಡಿಯಲ್ಲಿ ನಿನ್ನೆ ರಾತ್ರಿ ಮಲಗಿತ್ತು. ಇಂದು ಮುಂಜಾನೆ ಕೊಠಡಿಗೆ ದಿಢೀರ್ ಬೆಂಕಿ ತಗಲಿತ್ತೆಂದೂ, ಆಗ ನಾವು ಅದನ್ನು ನಂದಿಸಿದೆವು, ಆ ವೇಳೆ ಆ ಕೊಠಡಿಯೊಳಗಿದ್ದ ತನ್ನ ಮಗು ನಂತರ ನಾಪತ್ತೆಯಾಗಿರುವುದಾಗಿ ಮಗುವಿನ ಹೆತ್ತವರು ಪೊಲೀಸರಲ್ಲಿ ತಿಳಿಸಿದ್ದಾರೆ. ಅವರ ಹೇಳಿಕೆಯಿಂದ ಶಂಕೆಗೊಂಡ ಪೊಲೀಸರು ಅವರು ಮತ್ತು ಬಾಲಕಿಯ ಮಾವನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಈ ಮನೆಯಿಂದ ಎರಡು ದಿನಗಳ ಹಿಂದೆ 30 ಲಕ್ಷ ರೂ. ನಾಪತ್ತೆಯಾಗಿತ್ತೆಂ ದು ದೂರಿ ಇದೇ ಬಾಲಕಿಯ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸಿದಾಗ, ಬಾಲಕಿಯ ಹೆತ್ತವರು ತದ್ವಿರುದ್ಧವಾದ ರೀತಿಯ ಹೇಳಿಕೆಯನ್ನು ನೀಡಿದ್ದರು. ಮಾತ್ರವಲ್ಲ ಮಗುವಿನ ತಂದೆ ಶ್ರೀಜಿತ್‌ನ ತಂದೆ ೧೬ ದಿನಗಳ ಹಿಂದೆಯಷ್ಟೇ ಸಾವನ್ನಪ್ಪಿದ್ದರು. ಆ ಬಳಿಕವಷ್ಟೇ ಮಗುವಿನ ಹೆತ್ತವರು ನಮ್ಮ ಮನೆಯಿಂದ ೩೦ ಲಕ್ಷ ರೂ. ನಾಪತ್ತೆಯಾಗಿದೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದಾದ ಬೆನ್ನಲ್ಲೇ ದೇವೇಂದು ಇಂದು ಬೆಳಿಗ್ಗೆ ನಿಗೂಢವಾದ ರೀತಿಯಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದೆಲ್ಲವೂ ಬಾರೀ ನಿಗೂಢತೆಗಳಿಗೂ ದಾರಿ ಮಾಡಿಕೊಟ್ಟಿದೆ. ಅದನ್ನು ಭೇದಿಸುವ ತೀವ್ರ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ.