ಎರಡೆಡೆಯ ಇಬ್ಬರು ಯುವತಿಯರು ನಾಪತ್ತೆ
ಕಾಸರಗೋಡು: ಎರಡು ವಿಭಿನ್ನ ಘಟನೆಗಳಲ್ಲಾಗಿ ನೀಲೇಶ್ವರ, ಚಿತ್ತಾರಿಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಇಬ್ಬರು ಯುವತಿಯರು ನಾಪತ್ತೆಯಾಗಿದ್ದಾರೆ. ಚಿತ್ತಾರಿಕಲ್ ಕುಳಿಯಿಲ್ ನಿವಾಸಿ ಅಪರ್ಣ ಸುನಿಲ್ (18) ನಿನ್ನೆ ಸಂಜೆ ನಾಪತ್ತೆಯಾಗಿದ್ದಾಳೆ. ತಾಯಿ ಚಂದ್ರಮತಿ ನೀಡಿದ ದೂರಿನಂತೆ ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.
ನೀಲೇಶ್ವರ ಪೇರಾಲ್ ವಿಲ್ಲೇಜ್ನ ಚಾತಮತ್ ನಿವಾಸಿ ವಿಜೀಶ (27) ನಾಪತ್ತೆಯಾದ ಇನ್ನೋರ್ವೆ ಯುವತಿ. ಈಕೆ ಈ ತಿಂಗಳ 4 ರಂದು ಸಂಜೆ 3 ಗಂಟೆಗೆ ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿರುವುದಾಗಿ ಸಹೋದರ ವಿಜೇಶ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ನೀಲೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ.