ಎಲ್‌ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 48.50 ರೂ. ಏರಿಕೆ

ಹೊಸದಿಲ್ಲಿ: ನವರಾತ್ರಿ ಉತ್ಸವದ ಹೊತ್ತಲ್ಲೇ ದೇಶಾದ್ಯಂತ ತೈಲ ಕಂಪೆನಿಗಳು 19 ಕೆ.ಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 48.50 ರೂ. ಏರಿಕೆ ತಂದಿದೆ. ಈ ಹೆಚ್ಚಳವನ್ನು ಇಂದಿನಿಂದಲೇ ಅನ್ವಯಗೊಳಿಸಲಾಗಿದೆ.

ಇಂಡಿಯನ್ ಆಯಿಲ್ ಬಿಡುಗಡೆ ಮಾಡಿರುವ ಇತ್ತೀಚಿನ ದರಗಳ ಪ್ರಕಾರ ಇಂದಿನಿಂದ ವಾಣಿಜ್ಯ  ಎಲ್‌ಪಿಜಿ ಸಿಲಿಂಡರ್ ಬೆಲೆ ದೆಹಲಿ ೧೭೪೦ ರೂ., ಮುಂಬೈ  1692.50 ರೂ., ಚೆನ್ನೈಯಲ್ಲಿ 1903, ಕೋಲ್ಕತ್ತಾದಲ್ಲಿ 1850.50 ರೂ ಆಗಿರುತ್ತದೆ. ಈ ಹಿಂದೆ ಸೆಪ್ಟಂಬರ್‌ನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ೩೯ ರೂ. ಏರಿಕೆ ಯಾಗಿತ್ತು. ನಂತರ  ಈಗ  ಮತ್ತೆ ಬೆಲೆ ಹೆಚ್ಚಿಸಲಾಗಿದೆ.

ಹಣದುಬ್ಬರದಿಂದ ಜನರು ತತ್ತರಿಸುತ್ತಿರುವಾಗಲೇ ಅಡುಗೆ ಅನಿಲ ದರ ಮತ್ತೆ ಹೆಚ್ಚಿಸಲಾಗಿದೆ. ಇದರ ಪರಿಣಾಮ ಹೋಟೆಲ್‌ಗಳಲ್ಲಿ ಆಹಾರ ಸಾಮಗ್ರಿಗಳ  ಬೆಲೆಯೇರಿಕೆಗೆ ರಹದಾರಿ  ಮಾಡಿಕೊದಂತಾಗಿದೆ.

You cannot copy contents of this page