ಎಲ್‌ಪಿ ಶಾಲಾ ಅಧ್ಯಾಪಕ ರ‍್ಯಾಂಕ್ ಪಟ್ಟಿಯ ಕಾಲಾವಧಿ ಕೊನೆಗೊಳ್ಳಲು ಒಂದು ತಿಂಗಳು ಬಾಕಿ: ಉದ್ಯೋಗಾರ್ಥಿಗಳಿಗೆ ನಿರಾಸೆ

ಕಾಸರಗೋಡು: ಎಲ್ಪಿ ಶಾಲಾ ಅಧ್ಯಾಪಕ ನೇಮಕಾತಿಗೆ ಜಿಲ್ಲೆಯಲ್ಲಿ ಜ್ಯಾರಿಯಲ್ಲಿರುವ ರ್ಯಾಂ ಕ್ ಪಟ್ಟಿಯ ಕಾಲಾವಧಿ ಮೇ 31ರಂದು ಕೊನೆಗೊಳ್ಳಲಿದೆ. 2019ರ ವಿಜ್ಞಾಪನಾ ಪ್ರಕಾರ 2022 ಮೇ 31ರಂದು ಜ್ಯಾರಿಗೆ ಬಂದ ರ್ಯಾಂ ಕ್ ಪಟ್ಟಿಯಿಂದ 261 ಮಂದಿಯನ್ನು ಇದುವರೆಗೆ ಹುದ್ದೆಗೆ ನೇಮಕ ಮಾಡಲಾಗಿದೆ. ಪ್ರಧಾನ ಪಟ್ಟಿಯಿಂದ 598 ಮಂದಿ, ಸಪ್ಲಿಮೆಂಟರಿ ಪಟ್ಟಿಯಿಂದ 393 ಮಂದಿ ಸಹಿತ ಒಟ್ಟು 991 ಮಂದಿಯ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಕೋವಿಡ್ ಕಾಲವಾದ 2019ರಲ್ಲಿ ಅರ್ಜಿ ಆಹ್ವಾನಿಸಿದ್ದು, 2022ರಲ್ಲಿ ಪಟ್ಟಿ ಪ್ರಕಟಿಸಲಾಗಿತ್ತು.
ಜಿಲ್ಲಾ ಶಿಕ್ಷಣ ಉಪನಿರ್ದೇಶಕರು 2025ರ ಎಪ್ರಿಲ್ 15ರಂದು ಪ್ರಕಟಿಸಿದ ಪಟ್ಟಿಯಲ್ಲಿ ಪ್ರಾಥಮಿಕ ಮುಖ್ಯೋಪಾಧ್ಯಾಯರು 54 ಮಂದಿ, ಎಲ್ಪಿ- 59, ಯುಪಿ- 50 ಎಂಬೀ ರೀತಿಯಲ್ಲಿ ಹುದ್ದೆಗಳು ಖಾಲಿಯಿವೆ. ಈ ಹುದ್ದೆಗಳನ್ನು ಪಿಎಸ್ಸಿ ವರದಿ ಮಾಡಿಲ್ಲವೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮಧ್ಯೆ ಹೊಸ ವಿಜ್ಞಾಪನೆ ಪ್ರಕಾರ ಪರೀಕ್ಷೆ ಬರೆಯಲು ಸಾಧ್ಯವಾಗದ ಹಲವು ಮಂದಿ ನೇಮಕಾತಿಗಾಗಿ ಕಾದು ನಿಂತಿದ್ದಾರೆ. ಖಾಲಿ ಹುದ್ದೆಗಳ ಕುರಿತು ಯಥಾಸಮಯ ವರದಿ ಮಾಡದಿರುವುದೇ ಸರಕಾರಿ ಉದ್ಯೋಗವೆಂಬ ಕನಸು ನನಸಾಗದೆ ಸಾವಿರಾರು ಮಂದಿ ಉದ್ಯೋಗಾರ್ಥಿಗಳು ನಿರಾಸೆ ಪಡುವಂತಾಗಿದೆ.

You cannot copy contents of this page