ಎಲ್ಲರೂ ನಿಂತು, ಕುಳಿತು ಹಾಡುವಾಗ ತಲೆಕೆಳಗಾಗಿಸಿ ಹಾಡುವ ಗೋಪಾಲ್‌ಜೀ

ಬಂದಡ್ಕ: ಎಲ್ಲರೂ ನಿಂತು, ಕುಳಿತು ಹಾಡುವಾಗ ಬಂದಡ್ಕ ಪಡ್ಪು ಶಂಕರಂಪಾಡಿಯ ಗೋಪಾಲ್‌ಜೀ ಅವರು ತಲೆಕೆಳಗಾಗಿ ಹಾಡುತ್ತಿದ್ದಾರೆ. ಗೋಪಾಲ್‌ಜೀಯವರು ತಾಳ, ಲಯ ಬದ್ಧವಾಗಿ  ಸುಮಧುರವಾಗಿ ಹಾಡುತ್ತಿ ರುವುದು ಪ್ರೇಕ್ಷಕರನ್ನು  ಆಕರ್ಷಿಸುತ್ತಿದೆ.

ಬಾಲ್ಯದಲ್ಲಿ ಕೆಲವು ಕಾರಣಗ ಳಿಂದಾಗಿ ಸೂಕ್ತ ಶಿಕ್ಷಣ ಪಡೆಯಲು ಅವಕಾಶ ಲಭಿಸದ ಗೋಪಾಲ್‌ಜಿ ಯವರು ಸಾಮಾನ್ಯ ಜನರು ನಡೆಸುವ ಕೂಲಿ ಕೆಲಸದಲ್ಲಿ ತನ್ನನ್ನು ತೊಡಗಿಸಿ ಕೊಂಡರು. ಕೂಲಿ ಕೆಲಸದಿಂದ ನೆಮ್ಮದಿ ಕಂಡುಕೊಂಡ ಅವರು ಗದ್ದೆ, ಬಯಲುಗಳಲ್ಲೂ ಕೃಷಿ ಕೆಲಸ ನಿರ್ವ ಹಿಸಿದರು. ಅನುಭವದಿಂದ ತಿಳುವಳಿಕೆ ಪಡೆದ ಇವರು ಕಾಣುವುದು, ಕೇಳು ವುದನ್ನೆಲ್ಲಾ ಮನಸ್ಸಿನಲ್ಲಿ  ಜೋಪಾನ ವಾಗಿಡುತ್ತಿದ್ದರು. ಉನ್ನತ ಶಿಕ್ಷಣದಿಂದ ತಿಳುವಳಿಕೆ ಪಡೆದವರಿಗಿಂತಲೂ ಹೆಚ್ಚು ಚಿಂತನೆ,  ಮಾತುಗಾರಿಕೆ, ಚಟುವಟಿಕೆಗಳಲ್ಲಿ ತನ್ನ ತಿಳುವಳಿಕೆಯ ಬೆಳಕನ್ನು ಹರಿಸುತ್ತಿದ್ದಾರೆ.

ಚಾನೆಲ್‌ಗಳಲ್ಲಿ ಹಾಗೂ ಸಾಮಾ ಜಿಕ ತಾಣಗಳಲ್ಲಿ ಹಲವರು ಹಾಡುವ ಹಾಡುಗಳು ಹಾಗೂ ಅದಕ್ಕೆ ಲಭಿಸುವ ಅಂಗೀಕಾರವನ್ನು ಗೌರವದಿಂದಲೇ ಕಾಣುತ್ತಿರುವ ಗೋಪಾಲ್‌ಜಿಯವರಿಗೆ ಒಂದು ಹಂಬಲವುಂಟಾಯಿತು. ಅದು ಬೇರೇನೂ ಅಲ್ಲ. ಆ ವೇದಿಕೆಗಳಲ್ಲಿ ತನಗೂ ಹಾಡಬೇಕು. ಅವರಿಗೆ ಲಭಿ ಸುವ ರೀತಿಯ ಅಂಗೀಕಾರ ಪಡೆಯ ಬೇಕು ಎಂಬುದಾಗಿದೆ  ಅದು.

ತಾಯಿ ಹಾಗೂ ಅಜ್ಜಿಯ  ಹಾಡು, ಆಟಗಳನ್ನು ಕಂಡು ಬೆಳೆದ ಗೋಪಾಲ್‌ಜೀಯವರಿಗೆ ಅಕ್ಷರ ತಿಳಿದಿಲ್ಲವಾದರೂ ಕೇಳಿ ತಿಳಿದು ಕೊಂಡ ಪದಗಳು, ವಾಕ್ಯಗಳನ್ನು ಶ್ರುತಿ, ಲಯಬದ್ಧವಾಗಿ ಹಾಡುತ್ತಿದ್ದಾರೆ. ಆ ಸಾಮರ್ಥ್ಯವನ್ನು ಇನ್ನಷ್ಟು ಉತ್ತಮಪಡಿಸಿ ದರೂ ಅದರಿಂದ ಮನಸ್ಸು ತೃಪ್ತಿ ಹೊಂದ ಲಿಲ್ಲ. ಹಾಗಿರುವಾಗಲೇ ಗಾಯಕರಿಂದ ವ್ಯತ್ಯಸ್ಥವಾದ ಒಂದು ಗಾನಾಲಾಪನೆ ಕುರಿತು ಗೋಪಾಲ್‌ಜೀಯವರ ಮನಸ್ಸು ಚಿಂತಿಸಿತು. ಎಲ್ಲರೂ ನಿಂತು, ಕುಳಿತು ಹಾಡುವಾಗ ತಾನು ತಲೆಕೆಳಗಾಗಿಸಿ ಹಾಡಿದರೇನು ಎಂಬ ಭಾವನೆ  ಅವರಲ್ಲಿ ಮೂಡಿತು. ಅನಂತರ ಅದಕ್ಕಾಗಿ ಅವರು ಪ್ರಯತ್ನಿಸಿದರು. ಹಲವು ಬಾರಿ ಆ ರೀತಿಯಲ್ಲಿ ಹಾಡಲು ಪ್ರಯತ್ನಿಸಿದಾಗ  ಸೇವಿಸಿದ ಆಹಾರ ಬಾಯಿ, ಮೂಗು ಮೂಲಕ ಹೊರಗೆ ಬಂತು.

ಆದರೂ ತನ್ನ ಪ್ರಯತ್ನ ಮತ್ತೆ ಮುಂದುವರಿಸಿದರು. ಗುರಿಸಾಧಿಸುವ ಪ್ರಯತ್ನದೊಂದಿಗೆ ಮತ್ತೆ ಮತ್ತೆ ಹಾಡಿದರು. ಮೊದಲು ಒಂದು ಗೆರೆ, ನಂತರ ನಾಲ್ಕು ಸಾಲು, ಬಳಿಕ ಒಂದು ಹಾಡನ್ನು ಪೂರ್ತಿ ಹಾಡಿದರು.  ಕೊನೆಗೆ ಕಲಾಭವನ್ ಮಣಿಯವರ ಎರಡು ಜಾನಪದ ಹಾಡುಗಳನ್ನು ಗಟ್ಟಿ ಸ್ವರದಲ್ಲಿ ಹಾಡಿದರು ಗೋಪಾಲ್‌ಜೀ. ಈಗ ೧೫ ನಿಮಿಷವರೆಗೆ ತಲೆಕೆಳಗಾಗಿಸಿ ತಾಳ, ಲಯ ಬದ್ಧವಾಗಿ ತಪ್ಪದೆ ಸುಶ್ರಾವ್ಯವಾಗಿ ಹಾಡುತ್ತಿದ್ದಾರೆ. ಈ ಮೂಲಕ ಅವರು ಅಂಗೀಕಾರ, ಗೌರವವನ್ನು ಪಡೆಯುತ್ತಿದ್ದಾರೆ.

ಹಾಡಿನಲ್ಲಿ ಮಾತ್ರವಲ್ಲ ಯಾವುದೇ ವಿಷಯದಲ್ಲೂ ದೃಢ ನಿರ್ಧಾರವಿದ್ದರೆ ಯಾರಿಗೂ ತಮ್ಮ ಗುರಿ ಸಾಧಿಸಲು ಸಾಧ್ಯವಿದೆಯೆಂದು ಗೋಪಾಲ್‌ಜೀ ತಿಳಿಸುತ್ತಿದ್ದಾರೆ. (ಗೋಪಾಲ್‌ಜೀಯವರು ತಲೆಕೆಳಗಾಗಿಸಿ ಹಾಡುವುದನ್ನು ‘ಕಾರವಲ್’ ಮೀಡಿಯ ಯೂಟ್ಯೂಬ್ ಚ್ಯಾನೆಲ್‌ನಲ್ಲಿ ವೀಕ್ಷಿಸಬಹುದು)

Leave a Reply

Your email address will not be published. Required fields are marked *

You cannot copy content of this page