ಎಸ್‌ಎನ್‌ಡಿಪಿ ಹೊಸಂಗಡಿ ಶಾಖೆ ಪದಾಧಿಕಾರಿಗಳು
ಮಂಜೇಶ್ವರ: ಎಸ್‌ಎನ್‌ಡಿಪಿ ಹೊಸಂಗಡಿ ಶಾಖೆಯ ವಾರ್ಷಿಕ ಮಹಾಸಭೆ ಇತ್ತೀಚೆಗೆ ಎಂ.ಎಸ್. ಜಯರಾಜ್‌ರ ಅಧ್ಯಕ್ಷತೆಯಲ್ಲಿ ಪ್ರೇರಣಾ ಹೊಸಂಗಡಿಯಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಕೆ. ನಾರಾಯಣ್, ಜಿಲ್ಲಾ ಕಾರ್ಯದರ್ಶಿ ಗಣೇಶ್ ಪಾರೆಕಟ್ಟ, ಉಪಾಧ್ಯಕ್ಷ ವಿಜಯ, ಮೋಹನ್ ಯೂನಿಯನ್ ಕೌನ್ಸಿಲ್ ಮೆಂಬರ್, ನವೀನ್‌ರಾಜ್ ಕೆ.ಜೆ, ಪದ್ಮನಾಭ ಕಡಪ್ಪರ, ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸುನಿತಾ ಕನಿಲ ಉಪಸ್ಥಿತರಿದ್ದರು. ರಮೇಶ್ ಬಿ.ಎಂ ಹೊಸಂಗಡಿ ಭಾಗವಹಿಸಿದರು. ಹೊಸ ಸಮಿತಿಗೆ ಗಂಗಾಧರ ದುರ್ಗಿಪಳ್ಳ ಅಧ್ಯಕ್ಷರಾಗಿ ಮಿನಿ ಮೋಳ್ ಕಾರ್ಯದರ್ಶಿಯಾಗಿ, ದೇವರಾಜ್ ಎಂ.ಎಸ್ ಉಪಾಧ್ಯಕ್ಷರಾಗಿ, ಪದ್ಮನಾಭ ಕಡಪ್ಪರ ಯೂನಿಯನ್ ಮೆಂಬರ್, ಸದಸ್ಯರಾಗಿ ನವೀನರಾಜ್ ಕೆ.ಜೆ, ಸುಜಾತಾ ದುರ್ಗಿಪಳ್ಳ, ರಮೇಶ್ ಬಿ.ಎಂ, ಶಿವಪ್ರಸಾದ್ ಪೆಲಪಾಡಿ, ರಜನಿ ಮಜಾಲ್, ನವೀನ್ ಕೌಡೂರು,ಸದಾಶಿವ ಅಂಗಡಿಪದವು ಆಯ್ಕೆಯಾದರು.